alex Certify
ಕನ್ನಡ ದುನಿಯಾ       Mobile App
       

Kannada Duniya

ಹಣ ಸಂಪಾದನೆಗೆ ಈ ಸುಂದರಿ ಮಾಡಿದ್ದೇನು..?

suratಸೂರತ್: ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಎಂಬ ಮಾತು ಪ್ರಚಲಿತದಲ್ಲಿದೆ. ಹಣಕ್ಕಾಗಿ ಯಾರು ಏನೂ ಬೇಕಾದರೂ ಮಾಡುತ್ತಾರೆ ಎಂದೂ ಹೇಳಲಾಗುತ್ತದೆ. ಇಲ್ಲೊಬ್ಬಳು ಹಣ ಸಂಪಾದಿಸಿ ಶ್ರೀಮಂತಳಾಗಬೇಕೆಂಬ ಉದ್ದೇಶದಿಂದ ಏನು ಮಾಡಿದ್ದಾಳೆ ನೋಡಿ.

ಸೂರತ್ ನಲ್ಲಿ ಕೈತುಂಬ ಹಣ ಸಂಪಾದನೆ ಇದ್ದ ಮಹಿಳೆಯೊಬ್ಬಳು, ದಿಢೀರ್ ಶ್ರೀಮಂತಳಾಗಬೇಕೆಂಬ ಹಂಬಲದಿಂದ ಮೂವರ ಕೊಲೆ ಮಾಡಿಸಿದ್ದಾಳೆ. 25 ವರ್ಷದ ಕೋಮಲ್ ಗೊಯಾನಿ ಈ ಕೃತ್ಯ ಎಸಗಿದ ಮಹಿಳೆ. ಮದುವೆಯಾಗಿ 4 ವರ್ಷದ ಮಗು ಹೊಂದಿರುವ ಈಕೆ, ಗಂಡನಿಗೆ ವಿಚ್ಛೇದನ ನೀಡಿ ರಿಯಲ್ ಎಸ್ಟೇಟ್ ಕಮಿಶನ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಳು. ಮೊದಲಿಗೆ ಬೇರೆಯವರ ಬಳಿ ಕೆಲಸ ಮಾಡುತ್ತಿದ್ದ ಆಕೆ ಶ್ರೀಮಂತರ ಸಂಪರ್ಕ ಸಾಧಿಸಿದ್ದಳು.

ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಭಾರೀ ಹೆಸರು ಗಳಿಸಿದ್ದ ಬಾಲು ಹಿರಾನಿ ಜೊತೆಗೆ ಪ್ರಾಪರ್ಟಿಯೊಂದರ ಮಾರಾಟ ಮಾಡಿಸಿದ್ದ ಆಕೆ 50 ಲಕ್ಷ ರೂ.ಕಮಿಶನ್ ಗೆ ಬೇಡಿಕೆ ಇಟ್ಟಿದ್ದಾಳೆ. ಇದಕ್ಕೆ ಆತ ಒಪ್ಪದಿದ್ದಾಗ, ತನ್ನ ಸಂಬಂಧಿಕರನ್ನು ಬಳಸಿಕೊಂಡು, ಬಾಲು ಹಿರಾನಿ ಸೇರಿದಂತೆ ಮೂವರು ಶ್ರೀಮಂತ ಉದ್ಯಮಿಗಳನ್ನು ಕೊಲೆ ಮಾಡಿಸಿದ್ದಾಳೆ.

ಆ ಉದ್ಯಮಿಗಳಿಗೂ ಹಣಕ್ಕೆ ಬೇಡಿಕೆ ಇಟ್ಟಿದ್ದ ಕೋಮಲ್, ಅವರು ಕೇಳಿದಷ್ಟು ಹಣ ಕೊಡದ ಕಾರಣ ಕೊಲೆ ಮಾಡಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿ, ಕೋಮಲ್ ಮತ್ತು ಆಕೆಗೆ ಸಹಕಾರ ನೀಡಿ, ಕೃತ್ಯದಲ್ಲಿ ಭಾಗಿಯಾದ ಮೂವರನ್ನು ಬಂಧಿಸಿದ್ದು, ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...