alex Certify
ಕನ್ನಡ ದುನಿಯಾ       Mobile App
       

Kannada Duniya

ಐಸಿಐಸಿಐ ಕ್ಯಾಶಿಯರ್ ಮೇಲೆ ಗುಂಡು ಹಾರಿಸಿ ನಂತ್ರ ಮಾಡ್ದ ಈ ಕೆಲಸ

ಮಧ್ಯಪ್ರದೇಶದ ನರಸಿಂಹಪುರ ಜಿಲ್ಲೆಯಲ್ಲಿ ಕೊಲೆ ಯತ್ನ ಪ್ರಕರಣವೊಂದು ನಡೆದಿದೆ. ಐಸಿಐಸಿಐ ಬ್ಯಾಂಕ್ ನಲ್ಲಿ ಕೆಲಸ ಮಾಡ್ತಿರುವ ಯುವತಿ ಮೇಲೆ ಯುವಕನೊಬ್ಬ ಗುಂಡು ಹಾರಿಸಿದ್ದಾನೆ. ನಂತ್ರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಐಸಿಐಸಿಐ ಬ್ಯಾಂಕ್ ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡ್ತಿರುವ ಗರೀಮಾ ಚೌಧರಿ ಮನೆಗೆ ತೆರಳುತ್ತಿದ್ದಳು. ಈ ವೇಳೆ ಹಿಂದಿನಿಂದ ಲೋಕೇಶ್ ಎಂಬಾತ ಗುಂಡು ಹಾರಿಸಿದ್ದಾನೆ. ಗುಂಡಿನ ಶಬ್ಧ ಕೇಳಿ ಜನ ಸೇರಿದ್ದಾರೆ. ಲೋಕೇಶ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಕೆಲ ಹೊತ್ತಿನಲ್ಲಿಯೇ ಲೋಕೇಶ್ ಕೂಡ ಗುಂಡು ಹಾರಿಸಿಕೊಂಡಿದ್ದಾನೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಲೋಕೇಶ್ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದೊಂದು ಪ್ರೇಮ ಪ್ರಸಂಗ ಎನ್ನಲಾಗ್ತಿದೆ. ತನಿಖೆ ನಂತ್ರ ಸತ್ಯ ಹೊರಬರಬೇಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...