alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಟ್ರೋ ಮುಂಭಾಗ ಅಪ್ಪಿಕೊಂಡು ಪ್ರತಿಭಟಿಸಿದ ಯುವಕ-ಯುವತಿಯರು

ಕೋಲ್ಕತ್ತಾದಲ್ಲಿ ಯುವ ಜೋಡಿಯೊಂದು ಮೆಟ್ರೋ ಟ್ರೈನ್ ನಲ್ಲಿ ಅಪ್ಪಿಕೊಂಡ ಕಾರಣಕ್ಕೆ ಕೆಲವರು ವಿರೋಧಿಸಿ, ಹೊಡೆದು ನೈತಿಕ ಪೊಲೀಸ್ ಗಿರಿ ಮಾಡಿದ್ದರ ಹಿನ್ನೆಲೆಯಲ್ಲಿ ಕೆಲ ಯುವಕ-ಯುವತಿಯರ ಗುಂಪೊಂದು ವಿನೂತನ ಪ್ರತಿಭಟನೆ ನಡೆಸಿದೆ.

ಈ ಘಟನೆಯನ್ನು ವಿರೋಧಿಸಿ, ನೈತಿಕ ಪೊಲೀಸ್ ಗಿರಿ ಮಾಡಿದ್ದನ್ನು ಪ್ರತಿಭಟಿಸಿ, ಕೋಲ್ಕತ್ತಾದ ಡಮ್ ಡಮ್ ಮೆಟ್ರೋ ಸ್ಟೇಷನ್ ಮುಂಭಾಗದಲ್ಲಿ ಯುವಕ-ಯುವತಿಯರ ಗುಂಪು ಫ್ರೀ ಹಗ್ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಸೋಮವಾರ ಮೆಟ್ರೋ ರೈಲಿನಲ್ಲಿ ಜೋಡಿ ಅಪ್ಪಿಕೊಂಡಿದ್ದನ್ನು ಸಹ ಪ್ರಯಾಣಿಕರು ಹಾಗೂ ಹಿರಿಯ ನಾಗರೀಕರು ವಿರೋಧಿಸಿ ಗಲಾಟೆ ಮಾಡಿ ಹಲ್ಲೆ ನಡೆಸಿದ್ದರು. ಈ ನೈತಿಕ ಪೊಲೀಸ್ ಗಿರಿ ಭಾರೀ ಸುದ್ದಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...