alex Certify
ಕನ್ನಡ ದುನಿಯಾ       Mobile App
       

Kannada Duniya

ಡ್ರಗ್ಸ್ ಗಾಗಿ ಅಡ್ಡ ದಾರಿ ಹಿಡಿದಿದ್ದಾರೆ ಹುಡುಗಿಯರು

drug

ಹೈದ್ರಾಬಾದ್ ನಲ್ಲಿ ಮಾದಕ ದ್ರವ್ಯಗಳ ಹಾವಳಿ ಮಿತಿಮೀರಿದೆ. ಶಾಲಾ ಮಕ್ಕಳು ಕೂಡ ಡ್ರಗ್ಸ್ ಚಟಕ್ಕೆ ದಾಸರಾಗ್ತಿದ್ದಾರೆ. ಡ್ರಗ್ಸ್ ದಂಧೆಯನ್ನು ತಡೆಯುವಂತೆ 20ಕ್ಕೂ ಹೆಚ್ಚು ಶಾಲೆ ಮತ್ತು 16 ಕಾಲೇಜುಗಳು ಸರ್ಕಾರವನ್ನು ಒತ್ತಾಯಿಸಿವೆ.

ಈ ಬಗ್ಗೆ ಪ್ರತಿಷ್ಠಿತ ಶಾಲಾ- ಕಾಲೇಜುಗಳು ಸರ್ಕಾರಕ್ಕೆ ಪತ್ರ ಬರೆದಿವೆ. 8 ಮತ್ತು 9ನೇ ತರಗತಿ ಮಕ್ಕಳು ಕೂಡ ಎಂಡಿಎಂಎ ಮತ್ತು ಎಲ್ ಎಸ್ ಡಿ ಪಾರ್ಟಿ ಡಗ್ಸ್ ಗೆ ದಾಸರಾಗ್ತಿದ್ದಾರೆ. ಹಾಗಾಗಿ ಶಾಲಾ ಶಿಕ್ಷಕರೇ ಮಕ್ಕಳ ಮೇಲೆ ಹದ್ದಿನ ಕಣ್ಣಿಡುತ್ತಿದ್ದಾರೆ.

ವಿದ್ಯಾರ್ಥಿಗಳು ಹೆಚ್ಚು ಹಣ, ಡೆಬಿಟ್/ ಕ್ರೆಡಿಟ್ ಕಾರ್ಡ್ ತಂದಿದ್ದಾರಾ ಅನ್ನೋದನ್ನು ಪರಿಶೀಲಿಸಲಾಗ್ತಿದೆ. ಶಾಲೆಯ ಸುತ್ತ ಅನುಮಾನಾಸ್ಪದ ವ್ಯಕ್ತಿಗಳ ಓಡಾಟವನ್ನು ಕೂಡ ಗಮನಿಸಲಾಗ್ತಿದೆ. ಇತ್ತೀಚೆಗಷ್ಟೆ 7 ಮಂದಿ ಡ್ರಗ್ ಡೀಲರ್ ಗಳನ್ನು ಬಂಧಿಸಲಾಗಿತ್ತು.

ಬಂಧಿತರಿಂದ 1000ಕ್ಕೂ ಹೆಚ್ಚು ಶಾಲಾ- ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ಖರೀದಿ ಮಾಡುತ್ತಿದ್ದುದು ಬಯಲಾಗಿದೆ. ವಾಟ್ಸಾಪ್ ಗ್ರೂಪ್ ಮೂಲಕ ಈ ದಂಧೆ ನಡೆಯುತ್ತಿದೆ. ಕೆಲವು ವಿದ್ಯಾರ್ಥಿನಿಯರು ಡ್ರಗ್ಸ್ ಗೆ ಬದಲಾಗಿ ತನ್ನ ಫೋಟೋ ತೆಗೆದುಕೊಳ್ಳುವಂತೆ ಡೀಲರ್ ಗಳಿಗೆ ಆಫರ್ ನೀಡುತ್ತಿದ್ದಾರೆ. ಕೆಲವು ಫೋಟೋಗಳನ್ನು ಕೂಡ ಕಳಿಸಿಕೊಟ್ಟಿದ್ದಾರೆ.

ಇದೆಲ್ಲವೂ ವಾಟ್ಸಾಪ್ ಮೂಲಕ ಬಹಿರಂಗವಾಗಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ವಿದ್ಯಾರ್ಥಿಗಳ ಪೋಷಕರನ್ನು ಕೂಡ ಎಚ್ಚರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...