alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಾಶ್ ಗಾರ್ಡ್ಸ್ ತೆಗೆಸದಿದ್ದಲ್ಲಿ ಬೀಳುತ್ತೆ ದಂಡ…!

ನಿಮ್ಮ ವಾಹನಗಳಲ್ಲಿರೋ ಕ್ರಾಶ್ ಗಾರ್ಡ್ಸ್ ಅಥವಾ ಬುಲ್ ಬಾರ್ ಗಳನ್ನು ತೆಗೆದು ಹಾಕಿ. ಇಲ್ಲದೇ ಹೋದಲ್ಲಿ ನಿಮಗೆ ತೊಂದರೆ ತಪ್ಪಿದ್ದಲ್ಲ. ಯಾಕಂದ್ರೆ ಅದು ಪಾದಚಾರಿಗಳಿಗೆ ಮತ್ತು ರಸ್ತೆ ಸಮೀಪದ ನಿವಾಸಿಗಳಿಗೆ ಅಪಾಯವನ್ನುಂಟು ಮಾಡುವುದರಿಂದ ಅದನ್ನು ತೆಗೆದು ಹಾಕಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ.

ಮೋಟಾರು ವಾಹನ ಕಾಯಿದೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಯಾ ರಾಜ್ಯ ಸರ್ಕಾರಗಳಿಗೂ ನಿರ್ದೇಶನ ನೀಡಿದೆ. ಈ ನಿಯಮವನ್ನು ಮೊದಲ  ಬಾರಿ ಉಲ್ಲಂಘಿಸಿದ್ರೆ 1000 ಹಾಗೂ ಎರಡನೇ ಬಾರಿ ಉಲ್ಲಂಘಿಸಿದ್ರೆ 2000 ರೂಪಾಯಿ ದಂಡ ವಿಧಿಸಲಾಗುತ್ತದೆ.

ವಿಪರ್ಯಾಸ ಅಂದ್ರೆ ವಿವಿಧ ರಾಜ್ಯಗಳಲ್ಲಿ ಸಂಚರಿಸುತ್ತಿರುವ ಸರ್ಕಾರಿ ವಾಹನಗಳು ಕೂಡ ಕ್ರಾಶ್ ಗಾರ್ಡ್ಸ್ ಹೊಂದಿವೆ. ಅಪಘಾತದ ಸಮಯದಲ್ಲಿ ಕಾರ್ ಗೆ ಹಾನಿಯಾಗಬಾರದೆಂದು ಅವುಗಳನ್ನು ಅಳವಡಿಸಲಾಗುತ್ತದೆ. ಆದ್ರೆ ಕ್ರಾಶ್ ಗಾರ್ಡ್ಸ್ ಇದ್ದಲ್ಲಿ ಅಪಘಾತವಾದಾಗ ಸರಿಯಾದ ಸಮಯದಲ್ಲಿ ಏರ್ ಬ್ಯಾಗ್ ತೆರೆದುಕೊಳ್ಳುವುದಿಲ್ಲ ಅಂತಾ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...