alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಕಣ್ತೆರೆಸುತ್ತದೆ ಈ ಪುಟ್ಟ ವಿಡಿಯೋ…!

ಬಹಳಷ್ಟು ಮಂದಿ ತಮ್ಮ ಉದ್ಯೋಗದ ಕುರಿತು ಗೊಣಗಾಡುತ್ತಲೇ ಇರುತ್ತಾರೆ. ಅದೇ ಅಫೀಸ್. ಅದೇ ಜನ. ಸಾಕಾಗಿ ಬಿಟ್ಟಿದೆ ಎಂದು ಆಗಾಗ ಹೇಳುತ್ತಿರುತ್ತಾರೆ. ಕಛೇರಿಯಲ್ಲಿ ಎಲ್ಲ ಸೌಕರ್ಯಗಳಿದ್ದರೂ ಅವರಿಗೆ 8 ಗಂಟೆಗಳ ಕಾಲ ಕೆಲಸ ಮಾಡುವುದೇ ಬೇಸರದ ಸಂಗತಿಯಾಗಿಬಿಟ್ಟಿರುತ್ತದೆ.

ಕಛೇರಿಯಲ್ಲಿ ಫ್ಯಾನ್ ಅಥವಾ ಎಸಿ ಕೆಳಗೆ ಆರಾಮಾಗಿ ಕುಳಿತು ಕೆಲಸ ಮಾಡುತ್ತಾ ಕೈ ತುಂಬಾ ಸಂಬಳ ಎಣಿಸುವವರಿಂದಲೂ ಇಂತಹ ಮಾತುಗಳು ಕೇಳಿ ಬರುತ್ತವೆ. ಅದರಲ್ಲೂ ಮನೆಯಿಂದ ಟ್ರಾಫಿಕ್ ನಲ್ಲಿ ಅಫೀಸ್ ತಲುಪುವ ಚಿಂತೆಯೇ ಹೆಚ್ಚಿನ ಉದ್ಯೋಗಸ್ಥರನ್ನು ಕಾಡುತ್ತದೆ.

ಆದರೆ ಕಛೇರಿ ಅಥವಾ ಮನೆ ಮುಂದೆ ಕಾಯುತ್ತಾ ಕುಳಿತುಕೊಳ್ಳುವ ವಾಚ್ ಮನ್ ಕುರಿತು ಎಂದಿಗೂ ಯೋಚಿಸುವುದಿಲ್ಲ. ಕಛೇರಿಯಲ್ಲಿ ಇರುವವರಿಗೆ ಕಡೇ ಪಕ್ಷ ಮಾತನಾಡಿಸಲು ಸಹೋದ್ಯೋಗಿಗಳಾದರೂ ಇರುತ್ತಾರೆ. ಆದರೆ ರಾತ್ರಿ- ಹಗಲು ಕಾಯುವ ವಾಚ್ ಮನ್ ಗೆ ಇಂತಹ ಯಾವುದೇ ಸೌಲಭ್ಯವೂ ಇರುವುದಿಲ್ಲ. ಬಿಸಿಲಿರಲಿ, ಚಳಿಯಿರಲಿ ಅಥವಾ ಮಳೆಯಿರಲಿ ಅವರು ಕಾರ್ಯ ನಿರ್ವಹಿಸಬೇಕಾಗುತ್ತದೆ. ಇಂತವರ ಕುರಿತು ಕೇವಲ 1 ನಿಮಿಷದ ಈ ವಿಡಿಯೋ ನಿಮ್ಮ ಕಣ್ತೆರೆಸುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...