alex Certify
ಕನ್ನಡ ದುನಿಯಾ       Mobile App
       

Kannada Duniya

ಮಾದರಿಯಾಗಿದೆ ಮುಖ್ಯಮಂತ್ರಿಯ ಈ ನಡೆ

yogi-car-d

ಲಖ್ನೋ: ಅಧಿಕಾರ ಸಿಕ್ಕರೆ ಸಾಕು, ದುಬಾರಿ ಕಾರು ಬೇಕೆನ್ನುವವರ ನಡುವೆ ಹಳೆ ಕಾರೇ ಇರಲಿ ಎನ್ನುವವರ ಸಂಖ್ಯೆ ತೀರಾ ಕಡಿಮೆ.

ಅಂತಹವರ ಸಾಲಿಗೆ ಸೇರಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಿಂದಿನ ಸಿ.ಎಂ. ಅಖಿಲೇಶ್ ಯಾದವ್ ಬಳಸಿದ್ದ ಕಾರನ್ನೇ ಬಳಸುವುದಾಗಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಓಡಾಟಕ್ಕಾಗಿ ಮರ್ಸಿಡೆಸ್ ಬೆಂಜ್ ಎಸ್.ಯು.ವಿ. ಕಾರ್ ಖರೀದಿಸಲು ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರು. ಬುಲೆಟ್ ಪ್ರೂಫ್ ವ್ಯವಸ್ಥೆ ಸೇರಿ ಸಿ.ಎಂ. ಅಗತ್ಯಕ್ಕೆ ತಕ್ಕಂತೆ ಈ ಕಾರ್ ಸಿದ್ಧಪಡಿಸಲು ಸುಮಾರು 5 ಕೋಟಿ ರೂ. ವೆಚ್ಚವಾಗುವ ಸಾಧ್ಯತೆ ಇತ್ತು.

ಆದರೆ, ಇದೆಲ್ಲಾ ದುಂದುವೆಚ್ಚವೆಂದು ಪರಿಗಣಿಸಿದ ಯೋಗಿ, ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು, 5 ವರ್ಷಗಳ ಹಿಂದೆ ಅಖಿಲೇಶ್ ಯಾದವ್ ಖರೀದಿಸಿ ಬಳಸಿದ್ದ ಕಾರನ್ನೇ ಉಳಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ 5 ಕೋಟಿ ರೂ. ಉಳಿತಾಯ ಮಾಡಿದ್ದಾರೆ.

ಈ ಹಿಂದೆ ಸಚಿವರಿಗಾಗಿ 31.86 ಲಕ್ಷ ರೂ. ಮೌಲ್ಯದ ಟಾಪ್ ಮಾಡೆಲ್ ಟೊಯೊಟಾ ಫಾರ್ಚೂನರ್ ಕಾರ್ ಖರೀದಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ಒಪ್ಪದ ಸಿ.ಎಂ. ಅದಕ್ಕಿಂತ ಅರ್ಧ ಬೆಲೆಯ ಇನೋವಾ ಕಾರ್ ಖರೀದಿಗೆ ಒಪ್ಪಿಗೆ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಹುದ್ದೆಯಿಂದ ಇಳಿದ ಅಖಿಲೇಶ್ ಯಾದವ್ ಸರ್ಕಾರದ ಕಾರನ್ನು ವಾಪಸ್ ಮಾಡಿದ್ದಾರೆ. ಅವರ ತಂದೆ ಎಸ್.ಪಿ. ನಾಯಕ ಮುಲಾಯಂ ಸಿಂಗ್ ಯಾದವ್ ಅವರಿಗೆ ನೀಡಲಾಗಿದ್ದ ಕಾರನ್ನು ಇನ್ನು ವಾಪಸ್ ಮಾಡಿಲ್ಲ.

ಅದನ್ನು ವಾಪಸ್ ಪಡೆಯಲು ಕೆಲವರು ಸಲಹೆ ನೀಡಿದ್ದು, ಇದನ್ನು ಒಪ್ಪದ ಯೋಗಿ, ಮುಲಾಯಂ ಸಿಂಗ್ ಅವರಿಗೆ ನೀಡಿದ ಸರ್ಕಾರದ ಕಾರನ್ನು ವಾಪಸ್ ಪಡೆಯಬೇಡಿ. ಅವರು ಹಿರಿಯ ನೇತಾರರು ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...