alex Certify
ಕನ್ನಡ ದುನಿಯಾ       Mobile App
       

Kannada Duniya

ಹತ್ತು ರೂಪಾಯಿಗೆ ಸಿಗ್ತಿದೆ ‘ಯೋಗಿ ಥಾಲಿ’

ಅನುದಾನಿತ ಆಹಾರ ಸೌಲಭ್ಯ ವ್ಯವಸ್ಥೆ ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಶುರುವಾಗಿದೆ. ಅಲಹಾಬಾದ್ ಮೇಯರ್ ಅಭಿಲಾಶ್ ಗುಪ್ತಾ ಈ ಯೋಜನೆಗೆ ಭಾನುವಾರ ಸಂಜೆ ಚಾಲನೆ ನೀಡಿದ್ದಾರೆ. ಈ ಯೋಜನೆಗೆ ಯೋಗಿ ಥಾಲಿ ಎಂದು ಹೆಸರಿಡಲಾಗಿದೆ.

ಒಂದು ಯೋಗಿ ಥಾಲಿ 10 ರೂಪಾಯಿಗೆ ಜನಸಾಮಾನ್ಯರಿಗೆ ಸಿಗಲಿದೆ. ಖಾಸಗಿ ಸಂಸ್ಥೆಯೊಂದು ಇದನ್ನು ಶುರು ಮಾಡಿದೆಯಂತೆ. ಬಡವರು, ನಿರ್ಗತಿಕರು, ವಿಕಲಾಂಗರು ಸೇರಿದಂತೆ ಸಾಧು-ಸಂತರಿಗೆ ಇದು ಲಾಭಕರವಾಗಿರಲಿದೆ. 10 ರೂಪಾಯಿಯಲ್ಲಿ ಹೊಟ್ಟೆ ತುಂಬಾ ಊಟ ಕನಸಿನ ಮಾತು. ತುತ್ತು ಅನ್ನಕ್ಕಾಗಿ ಪರದಾಡುವ ಜನರಿಗೆ ಸಹಾಯವಾಗಲಿ ಎನ್ನುವ ಕಾರಣಕ್ಕೆ ದಿಲೀಪ್ ಕುಮಾರ್ ನೇತೃತ್ವದ ಸಂಸ್ಥೆ ಇದನ್ನು ಶುರು ಮಾಡಿದೆ.

ಸದ್ಯ ಅಲಹಾಬಾದ್ ನ ಒಂದು ಪ್ರದೇಶದಲ್ಲಿ ಮಾತ್ರ ಇದು ಶುಭಾರಂಭಗೊಂಡಿದ್ದು, ಇನ್ನೂ ಅನೇಕ ಕಡೆ ಯೋಜನೆ ವಿಸ್ತರಿಸುವ ಪ್ಲಾನ್ ಇದೆ. ಬಡವರಿಗೆ ನೆರವಾಗ್ತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವ್ರನ್ನು ಆದರ್ಶವಾಗಿಟ್ಟುಕೊಂಡು ಅವ್ರ ಮಾರ್ಗದಲ್ಲಿ ನಡೆಯುತ್ತಿರುವ ಸಂಸ್ಥೆ ಇದೇ ಕಾರಣಕ್ಕೆ ಥಾಲಿಗೆ ಯೋಗಿ ಹೆಸರಿಟ್ಟಿದೆಯಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...