alex Certify
ಕನ್ನಡ ದುನಿಯಾ       Mobile App
       

Kannada Duniya

ಟಾಪರ್ ವಿದ್ಯಾರ್ಥಿಗಳ ಊರಿನಲ್ಲಿ ನಿರ್ಮಾಣವಾಗಲಿದೆ ಟಾರ್ ರಸ್ತೆ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಂದಿನ ಲೋಕಸಭಾ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶದ ನೂತನ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಅದರಲ್ಲೂ ವಿದ್ಯಾರ್ಥಿಗಳ ಹಾದಿ ಸುಗಮಗೊಳಿಸೋದಕ್ಕೆ ಮುಂದಾಗಿದ್ದಾರೆ. ಉತ್ತರ ಪ್ರದೇಶದ ಸರ್ಕಾರದಿಂದ ಪ್ರಕಟವಾಗಿರುವ ನೂತನ ಯೋಜನೆಯೊಂದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ಭಾಷ್ಯ ಬರೆಯಲಿದೆ.

ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರ ಲಾಪ್ಟಾಪ್ ಯೋಜನೆಗೆ ಟಾಂಗ್ ಕೊಡುವಂತ ಯೋಜನೆ ಇದಾಗಿದೆ. ಉತ್ತರ ಪ್ರದೇಶದ 10ನೇ ತರಗತಿ ಮತ್ತು ಪಿಯುಸಿ ಬೋರ್ಡ್ ಎಕ್ಸಾಮ್ನಲ್ಲಿ ಟಾಪ್ 10 ಸ್ಥಾನ ಗಳಿಸಿದ ವಿದ್ಯಾರ್ಥಿಗಳ ಊರಿನಲ್ಲಿ ರಸ್ತೆ ನಿರ್ಮಾಣಕ್ಕೆ ಯೋಗಿ ಸರ್ಕಾರ ಮುಂದಾಗಿದೆ. ಇದಕ್ಕಾಗಿಯೇ ಲೋಕೋಪಯೋಗಿ ಇಲಾಖೆಗೆ ಸರ್ಕಾರ 1 ಕೋಟಿ 22 ಲಕ್ಷವನ್ನ ಮೊದಲ ಹಂತದಲ್ಲಿ ಬಿಡುಗಡೆಗೊಳಿಸಿದೆ.

ಕಾಮಗಾರಿ ಅರಂಭಕ್ಕೆ ಈಗಾಗ್ಲೇ ಕೆಲವು ಪ್ರದೇಶಗಳನ್ನ ಗುರುತಿಸಲಾಗಿದೆ. 700 ಮೀಟರ್ ರಸ್ತೆ ನಿರ್ಮಾಣಕ್ಕೆ ಅಂದಾಜು 50 ಲಕ್ಷ ರೂಪಾಯಿ ಖರ್ಚಾಗಲಿದೆ. ಒಂದು ಕಿಲೋಮೀಟರ್ಗೆ 72.34 ಲಕ್ಷ ರೂಪಾಯಿ ಖರ್ಚಾಗುವ ಸಾಧ್ಯತೆ ಇದೆ ಅಂತ ಅಧಿಕಾರಿಗಳು ಹೇಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...