alex Certify
ಕನ್ನಡ ದುನಿಯಾ       Mobile App
       

Kannada Duniya

ಅಖಿಲೇಶ್ ರಂತೆ ಯೋಗಿ ಕೂಡ ನೀಡಲಿದ್ದಾರೆ ಉಚಿತ ಲ್ಯಾಪ್ ಟಾಪ್

cm-yogi_dv31hu7

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಯೋಗಿ ಆದಿತ್ಯನಾಥ್, ಹಿಂದಿನ ಸರ್ಕಾರ ಜಾರಿಗೆ ತಂದ ಬಹುತೇಕ ಎಲ್ಲ ಯೋಜನೆಗಳನ್ನು ರದ್ದು ಮಾಡ್ತಿದ್ದಾರೆ. ಸಮಾಜವಾದಿ ಎಂಬ ಹೆಸರಿನಲ್ಲಿ ಶುರುವಾಗಿರುವ ಎಲ್ಲ ಯೋಜನೆಗಳನ್ನೂ ರದ್ದು ಮಾಡಿದ್ದಾರೆ. ಆದ್ರೆ ಒಂದು ಯೋಜನೆ ಮಾತ್ರ ರದ್ದಾಗುವುದಿಲ್ಲ ಎಂದು ಮೂಲಗಳು ಹೇಳಿವೆ.

ಮಾಜಿ ಸಿಎಂ ಅಖಿಲೇಶ್ ಯಾದವ್ 2012ರಲ್ಲಿ ಅಧಿಕಾರಕ್ಕೆ ಬಂದ ನಂತ್ರ ಚುನಾವಣಾ ಪ್ರಣಾಳಿಕೆಯಂತೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ನೀಡ್ತಾ ಬಂದಿದ್ದಾರೆ. ಇದೇ ಯೋಜನೆಯನ್ನು ಯೋಗಿ ಸರ್ಕಾರ ಕೂಡ ಮುಂದುವರೆಸಲಿದೆಯಂತೆ. ಯೋಗಿ ಸರ್ಕಾರ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆಯಂತೆ.

ರಾಜ್ಯ ಸರ್ಕಾರ 12 ಲಕ್ಷ ವಿದ್ಯಾರ್ಥಿಗಳಿಗೆ 18 ಸಾವಿರ ರೂಪಾಯಿ ಮೌಲ್ಯದ ಲ್ಯಾಪ್ ಟಾಪ್ ನೀಡಲಿದೆಯಂತೆ. ಲ್ಯಾಪ್ ಟಾಪ್ ಜೊತೆಗೆ ಯೋಗಿ ಸರ್ಕಾರ 2ಜಿಬಿ ಡೇಟಾವನ್ನು ಕೂಡ ಉಚಿತವಾಗಿ ನೀಡಲಿದೆ ಎನ್ನಲಾಗ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...