alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಯಾಣಿಕರ ವಾಹನವಾಯ್ತು ಯುಪಿ ಅಂಬುಲೆನ್ಸ್

download-2

ಉತ್ತರ ಪ್ರದೇಶದಲ್ಲಿ ಅಖಿಲೇಶ್ ಸರ್ಕಾರ ಹೋಗಿ ಯೋಗಿ ಸರ್ಕಾರ ಬಂದಿದೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದ ಯೋಗಿ ಆ್ಯಂಬುಲೆನ್ಸ್ ಬಗ್ಗೆ ಹೆಚ್ಚಿನ ಗಮನ ನೀಡಿದಂತಿಲ್ಲ. ಆ್ಯಂಬುಲೆನ್ಸ್ ಮೇಲಿದ್ದ ಸಮಾಜವಾದಿ ಹೆಸರು ಬದಲಾಯಿಸಿದ್ದು ಬಿಟ್ಟರೆ ಮತ್ಯಾವ ಬದಲಾವಣೆ ಬಗ್ಗೆ ಮಹತ್ವ ನೀಡಿದಂತಿಲ್ಲ. ಹಾಗಾಗಿಯೇ ರೋಗಿಗಳನ್ನು ಹೊತ್ತೊಯ್ಯಬೇಕಾಗಿದ್ದ ಆ್ಯಂಬುಲೆನ್ಸ್ ಗಳು ಪ್ರಯಾಣಿಕರನ್ನು ಹೊತ್ತು ಸಾಗ್ತಾ ಇವೆ.

ಬಸ್ತಿಯಲ್ಲಿ ಆ್ಯಂಬುಲೆನ್ಸ್ ಒಂದು ಪ್ರಯಾಣಿಕರ ವಾಹನವಾಗಿ ಪರಿವರ್ತನೆಗೊಂಡಿದೆ. ಆ್ಯಂಬುಲೆನ್ಸ್ ನಿಂದ 5 ಪ್ರಯಾಣಿಕರು ಇಳಿದ ವಿಡಿಯೋ ವೈರಲ್ ಆಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮೇಲಿನ ಅಧಿಕಾರಿಗಳು ತನಿಖೆಗೆ ಆದೇಶ ಮಾಡಿದ್ದಾರೆ.

ಆರೋಗ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಈ ಎಲ್ಲ ಘಟನೆಗಳು ನಡೆಯುತ್ತಿವೆ. ಇಲಾಖೆ ಚಾಲಕರಿಗೆ ಸರಿಯಾಗಿ ಸಂಬಳ ನೀಡ್ತಾ ಇಲ್ಲ ಎಂಬ ಅನುಮಾನವೂ ವ್ಯಕ್ತವಾಗಿದೆ. ಹಾಗಾಗಿ ಚಾಲಕ, ಪ್ರಯಾಣಿಕರನ್ನು ಆ್ಯಂಬುಲೆನ್ಸ್ ಗೆ ತುಂಬಿದ್ದಾನೆಂಬ ಮಾತುಗಳೂ ಕೇಳಿ ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...