alex Certify
ಕನ್ನಡ ದುನಿಯಾ       Mobile App
       

Kannada Duniya

ಯುಪಿಯಲ್ಲಿ ಅಚ್ಚೇ ದಿನ್ ಶುರು: 3 ರೂ.ಗೆ ಉಪಹಾರ, 5 ರೂ.ಗೆ ಊಟ

yogi-1_887b6bw

ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಬಡವರು, ಕಾರ್ಮಿಕರು ಹಾಗೂ ರಿಕ್ಷಾ ಚಾಲಕರು, ಕಡಿಮೆ ಸಂಬಳ ಪಡೆಯುವ ಜನರಿಗೆ ಕಡಿಮೆ ಬೆಲೆಯ ಊಟ ಹಾಗೂ ಉಪಹಾರ ನೀಡಲು ಮುಂದಾಗಿದೆ. ಮೂರು ರೂಪಾಯಿಗೆ ಉಪಹಾರ ಹಾಗೂ ಐದು ರೂಪಾಯಿಗೆ ಊಟ ಸಿಗಲಿದೆ. ಅನ್ನಪೂರ್ಣ ಭೋಜನಾಲಯದ ಹೆಸರಿನಲ್ಲಿ ಶುರುವಾಗುವ ಈ ಯೋಜನೆಯ ಕರಡು ಸಿದ್ಧವಾಗಿದೆ.

ಗಾಜಿಯಾಬಾದ್ ನಲ್ಲಿ 20, ಲಕ್ನೋದಲ್ಲಿ 28, ಕಾನ್ಪುರದಲ್ಲಿ 28 ಮತ್ತು ಗೋರಕ್ಪುರದಲ್ಲಿ 18 ಸೇರಿದಂತೆ ಒಟ್ಟೂ 275 ಕ್ಯಾಂಟೀನ್ ಸೇವೆ ಶುರು ಮಾಡಲಿದೆ. ಇದಕ್ಕಾಗಿ ಸರ್ಕಾರ 153.59 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ. ಈ ಕ್ಯಾಂಟೀನ್ ನಲ್ಲಿ ಯಾರು ಉಪಹಾರ, ಊಟ ಮಾಡ್ತಾರೋ ಅವರ ಜೇಬಿನಿಂದ ಕೇವಲ 13 ರೂಪಾಯಿ ಖಾಲಿಯಾಗಲಿದೆ.

ಯಾವ ಸಮಯದಲ್ಲಿ ಯಾವ ಆಹಾರವನ್ನು ಎಷ್ಟು ಪ್ರಮಾಣದಲ್ಲಿ ನೀಡಬೇಕೆನ್ನುವುದನ್ನು ನಿರ್ಧರಿಸಲಾಗಿದೆ. ಆಹಾರ ಸೇವನೆ ಮಾಡುವವರಿಗಾಗಿ ಪ್ರಿಪೇಡ್ ಟೋಕನ್ ಅಥವಾ ಪ್ಲಾಸ್ಟಿಕ್ ಕಾರ್ಡ್ ನೀಡಲು ಸರ್ಕಾರ ನಿರ್ಧರಿಸಿದೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...