alex Certify
ಕನ್ನಡ ದುನಿಯಾ       Mobile App
       

Kannada Duniya

ಅಖಿಲೇಶ್ ಸ್ಮಾರ್ಟ್ಫೋನ್ ಯೋಜನೆಗೆ ತಿಲಾಂಜಲಿ

yogi_smart_phone_scheme_1492572523_749x421

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕರಿಸಿ ಒಂದು ತಿಂಗಳು ಕಳೆದಿದೆ. ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ಅನೇಕ ಬದಲಾವಣೆಗಳನ್ನು ಮಾಡ್ತಾ ಬಂದಿದ್ದಾರೆ ಯೋಗಿ. ಈಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ.

ಮಾಜಿ ಸಿಎಂ ಅಖಿಲೇಶ್ ಯಾದವ್ ಸ್ಮಾರ್ಟ್ಫೋನ್ ಯೋಜನೆಯನ್ನು ರದ್ದುಗೊಳಿಸಲು ಸಿಎಂ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಯೋಜನೆ ಪ್ರಕಾರ ಐದು ಕೋಟಿ ಜನರಿಗೆ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ಫೋನ್ ನೀಡಬೇಕಾಗಿತ್ತು. ತಮ್ಮ ಅಧಿಕಾರವಧಿಯ ಕೊನೆಯಲ್ಲಿ ಅಖಿಲೇಶ್ ಈ ಯೋಜನೆ ಘೋಷಣೆ ಮಾಡಿದ್ದರು. ಸರ್ಕಾರದ ಯೋಜನೆಗಳು ಸುಲಭವಾಗಿ ಜನರಿಗೆ ತಲುಪಲಿ ಎನ್ನುವ ಉದ್ದೇಶದಿಂದ ಅಖಿಲೇಶ್ ಈ ಯೋಜನೆ ಶುರುಮಾಡಿದ್ದರು. ಸುಮಾರು 1 ಕೋಟಿಗೂ ಹೆಚ್ಚು ಮಂದಿ ಹೆಸರು ನೋಂದಾಯಿಸಿದ್ದರು.

ಯೋಗಿ ಅಧಿಕಾರಕ್ಕೆ ಬರ್ತಾ ಇದ್ದಂತೆ ಹಿಂದಿನ ಸರ್ಕಾರ ಜಾರಿಗೆ ತಂದ ಎಲ್ಲ ಯೋಜನೆಗಳನ್ನು ರದ್ದುಪಡಿಸಿದ್ದಾರೆ. ಸಮಾಜವಾದಿ ಪಿಂಚಣಿ ಯೋಜನೆ, ಸಮಾಜವಾದಿ ಆ್ಯಂಬುಲೆನ್ಸ್ ಯೋಜನೆ ಸೇರಿದಂತೆ ಎಲ್ಲೆಲ್ಲಿ ಸಮಾಜವಾದಿ ಹೆಸರು ಬಂದಿದೆಯೋ ಆ ಎಲ್ಲ ಯೋಜನೆಗಳನ್ನು ರದ್ದು ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...