alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದದ ಮಧ್ಯೆ ತಾಜ್ ಮಹಲ್ ಗೆ ಹೋಗ್ತಾರೆ ಯೋಗಿ

ತಾಜ್ ಮಹಲ್ ವಿವಾದದ ಮಧ್ಯೆ ಉತ್ತರ ಪ್ರದೇಶದಿಂದ ದೊಡ್ಡ ಸುದ್ದಿಯೊಂದು ಬಂದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಕ್ಟೋಬರ್ 26ರಂದು ಆಗ್ರಾಕ್ಕೆ ಭೇಟಿ ನೀಡಲಿದ್ದಾರೆ. ತಾಜ್ ಯೋಜನೆಯ ಪರಿಶೀಲನೆ ನಡೆಸಲಿರುವ ಯೋಗಿ, ತಾಜ್ ಮಹಲ್ ಗೆ ಭೇಟಿ ನೀಡಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಲಿದ್ದಾರೆ.

ತಾಜ್ ಪ್ರಾಜೆಕ್ಟ್ ವಿಶ್ವ ಬ್ಯಾಂಕ್ ಸಹಯೋಗದಲ್ಲಿ ನಡೆಯುತ್ತಿದೆ. ತಾಜ್ ಮಹಲ್ ಸುತ್ತಮುತ್ತಲ ಪ್ರದೇಶವನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ. ತಾಜ್ ಮಹಲ್ ನಿಂದ ಆಗ್ರಾ ಕೋಟೆಯವರೆಗೆ 2 ಕಿಲೋಮೀಟರ್ ವರೆಗೆ ರಸ್ತೆ ಅಭಿವೃದ್ಧಿಗೆ ಕಾರಿಡಾರ್ ನಿರ್ಮಾಣ ಮಾಡಲಾಗ್ತಿದೆ. ಈ ಕಾರಿಡಾರ್ ನಲ್ಲಿ ಶಾಪಿಂಗ್ ಕಾಂಪ್ಲೆಕ್ಸ್, ಪ್ರವಾಸಿಗರ ಸಂಕೀರ್ಣ, ಉದ್ಯಾನವನ ಹಾಗೂ ರೆಸ್ಟೋರೆಂಟ್ ಗಳು ತಲೆ ಎತ್ತಲಿವೆ.

ಬಿಜೆಪಿ ಶಾಸಕ ಸಂಗೀತ್ ಸೋಮ್, ತಾಜ್ ಮಹಲ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ತಾಜ್ ಮಹಲ್ ನಮ್ಮ ಸಂಸ್ಕೃತಿಗೆ ಒಂದು ಗಾಯವೆಂದು ಹೇಳಿದ್ದರು. ತಾಜ್ ಮಹಲ್ ನಿರ್ಮಾಣ ಮಾಡಿದ ಷಹಜಹಾನ್ ತನ್ನ ತಂದೆಯನ್ನೇ ಬಂಧಿ ಮಾಡಿದ್ದ. ಹಿಂದೂಗಳನ್ನು ನಾಶ ಮಾಡುವ ಯೋಚನೆ ಹೊಂದಿದ್ದ. ಇದು ನಮ್ಮ ಇತಿಹಾಸದ ಭಾಗವಾಗಿದೆ. ಇದು ನಮಗೆ ದುಃಖದ ಸಂಗತಿ. ನಾವು ಇತಿಹಾಸವನ್ನು ಬದಲಾಯಿಸುತ್ತೇವೆ ಎಂದಿದ್ದರು.

ಸಂಗೀತ್ ಸೋಮ್ ಹೇಳಿಕೆ ನಂತ್ರ ಬಿಜೆಪಿ ಮೇಲೆ ಕಾಂಗ್ರೆಸ್ ಸೇರಿದಂತೆ ಅನೇಕ ನಾಯಕರು ಕೆಂಡ ಕಾರಿದ್ದರು. ಈಗ ತಾಜ್ ಮಹಲ್ ಗೆ ಭೇಟಿ ನೀಡಿ ವಿವಾದಕ್ಕೆ ಯೋಗಿ ತೆರೆ ಎಳೆಯುವ ಪ್ರಯತ್ನ ಮಾಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...