alex Certify
ಕನ್ನಡ ದುನಿಯಾ       Mobile App
       

Kannada Duniya

ರಾಮ ಮಂದಿರದ ಬಗ್ಗೆ ಯೋಗಿ ಜೊತೆ ರವಿಶಂಕರ್ ಮಾತುಕತೆ

ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಡುವೆ ನಡೆಯುತ್ತಿದ್ದ ಮಾತುಕತೆ ಮುಕ್ತಾಯವಾಗಿದೆ. ರಾಮ ಮಂದಿರ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆದಿದೆ. ರವಿಶಂಕರ್ ಗುರೂಜಿ  ಹಾಗೂ ಆದಿತ್ಯನಾಥ್ ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.

ಯೋಗಿ ಆದಿತ್ಯನಾಥ್ ಹಾಗೂ ರವಿಶಂಕರ್ ಗುರೂಜಿ ಬುಧವಾರ ಬೆಳಿಗ್ಗೆ ಮಾತುಕತೆ ನಡೆಸಿದ್ದಾರೆ. ಯೋಗಿ ಭೇಟಿ ನಂತ್ರ ರವಿಶಂಕರ್ ದಿಗಂಬರ್ ಅರೆನಾ, ರಾಷ್ಟ್ರೀಯ ಮುಸ್ಲಿಂ ವೇದಿಕೆ ಸದಸ್ಯರು, ಹಿಂದೂ ಮಹಾಸಭಾ ಸೇರಿದಂತೆ ಅನೇಕ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ನವೆಂಬರ್ 16ರಂದು ರವಿಶಂಕರ್ ಅಯೋಧ್ಯೆಗೆ ತೆರಳಲಿದ್ದಾರೆ. ರಾಮ್ ಲಲ್ಲಾ ದರ್ಶನ ಮಾಡಲಿದ್ದಾರೆ. ಅಲ್ಲಿ ಅನೇಕ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಲಿರುವ ರವಿಶಂಕರ್ ವಾಪಸ್ ಬಂದ ಬಳಿಕ ಮತ್ತೆ ಯೋಗಿ ಸರ್ಕಾರದ ಮಂತ್ರಿ ಮೊಹ್ಸಿನ್ ರಾಝಾ ಸೇರಿದಂತೆ ಮುಸ್ಲಿಂ ಸಮುದಾಯದ ಕೆಲ ಗಣ್ಯರನ್ನು ಭೇಟಿಯಾಗಲಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆ ಭೇಟಿ ಮುಗಿಸಿ ಮಂಗಳವಾರ ವಾಪಸ್ ಆಗಿದ್ದಾರೆ. ರಾಮನಿಲ್ಲದೆ ನಾವಿಲ್ಲ. ರಾಮನಿಲ್ಲದೆ ಭಾರತದ ಯಾವ ಕೆಲಸವೂ ಆಗಲು ಸಾಧ್ಯವಿಲ್ಲ. ಅಯೋಧ್ಯೆಯ ವೈಭವವನ್ನು ಹಿಂದಿರುಗಿಸುತ್ತೇನೆಂದು ಯೋಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...