alex Certify
ಕನ್ನಡ ದುನಿಯಾ       Mobile App
       

Kannada Duniya

ತಾಂತ್ರಿಕ ದೋಷದಿಂದ ಬಯಲಿನಲ್ಲಿಳಿದ ಯೋಗಿ ಕಾಪ್ಟರ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದ ಕಾರಣಕ್ಕೆ ಹೆಲಿಪ್ಯಾಡ್ ಬದಲು ಬಯಲಿನಲ್ಲಿ ಇಳಿದ ಘಟನೆ ಮಂಗಳವಾರದಂದು ನಡೆದಿದೆ.

ಕಸ್ಗಂಜ್ ನಲ್ಲಿ ದರೋಡೆಕೋರರಿಂದ ಹತ್ಯೆಯಾಗಿದ್ದ ಮೂವರ ಕುಟುಂಬ ಸದಸ್ಯರನ್ನು ಭೇಟಿಯಾಗಲು ಯೋಗಿ ಆದಿತ್ಯನಾಥ್ ಕಸ್ಗಂಜ್ ಗೆ ತೆರಳುತ್ತಿದ್ದು, ಕಸ್ತೂರ್ಬಾ ಗಾಂಧಿ ವಿದ್ಯಾಲಯದ ಆವರಣದಲ್ಲಿ ಯೋಗಿ ಆದಿತ್ಯನಾಥ್ ರ ಹೆಲಿಕಾಪ್ಟರ್ ಇಳಿಯಲು ಹೆಲಿಪ್ಯಾಡ್ ಸಿದ್ದಪಡಿಸಲಾಗಿತ್ತು.

ಆದರೆ ತಾಂತ್ರಿಕ ದೋಷದ ಕಾರಣ ಪೈಲೆಟ್ ಹೆಲಿಕಾಪ್ಟರ್ ನ್ನು ಹೆಲಿಪ್ಯಾಡ್ ನಲ್ಲಿ ಇಳಿಸದೆ ಸಮೀಪದ ಬಯಲಿನಲ್ಲಿ ಲ್ಯಾಂಡ್ ಮಾಡಿದ್ದಾರೆ. ಬಳಿಕ ಮುಖ್ಯಮಂತ್ರಿ ಆದಿತ್ಯನಾಥ್ ತಮ್ಮ ನಿಗದಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಹೆಲಿಪ್ಯಾಡ್ ನಿರ್ಮಿಸಿದ ಸ್ಥಳದ ಸುತ್ತ ಎತ್ತರದ ಮರಗಳಿದ್ದ ಕಾರಣ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಆಗಲಿಲ್ಲವೆಂಬ ಮಾತುಗಳೂ ಕೇಳಿ ಬರುತ್ತಿದ್ದು, ಜಿಲ್ಲಾಡಳಿತ ಈಗ ಈ ಕುರಿತು ತನಿಖೆಗೆ ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...