alex Certify
ಕನ್ನಡ ದುನಿಯಾ       Mobile App
       

Kannada Duniya

ಗೃಹ, ಕಂದಾಯ ಖಾತೆ ಉಳಿಸಿಕೊಂಡ ಯೋಗಿ

cm-up-yogi-ad

ಲಖ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪುಟ ಸದಸ್ಯರಿಗೆ ಖಾತೆ ಹಂಚಿಕೆ ಮಾಡಿದ್ದಾರೆ.

ಪ್ರಮುಖವಾದ ಗೃಹ ಮತ್ತು ಕಂದಾಯ ಖಾತೆಯನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರಿಗೆ ಪಿ.ಡಬ್ಲ್ಯೂ.ಡಿ., ಸಾರ್ವಜನಿಕ ಉದ್ದಿಮೆ, ಆಹಾರ ಸಂಸ್ಕರಣೆ ಇಲಾಖೆ ಹೊಣೆ ನೀಡಲಾಗಿದೆ.

ಮತ್ತೊಬ್ಬ ಉಪ ಮುಖ್ಯಮಂತ್ರಿ ದಿನೇಶ್ ಶರ್ಮ ಅವರಿಗೆ ಮಾಹಿತಿ ತಂತ್ರಜ್ಞಾನ, ಉನ್ನತ, ಮಾಧ್ಯಮಿಕ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಜವಾಬ್ದಾರಿ ನೀಡಲಾಗಿದೆ.

ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಅವರಿಗೆ ಕ್ರೀಡಾ ಖಾತೆಯನ್ನು ನೀಡಲಾಗಿದ್ದು, ಶ್ರೀಕಾಂತ್ ಶರ್ಮ ಅವರಿಗೆ ವಿದ್ಯುತ್, ಸಿದ್ಧಾರ್ಥನಾಥ್ ಸಿಂಗ್ ಅವರಿಗೆ ಆರೋಗ್ಯ ಇಲಾಖೆ ಹೊಣೆ ವಹಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...