alex Certify
ಕನ್ನಡ ದುನಿಯಾ       Mobile App
       

Kannada Duniya

ಪಟಾಕಿ ನಿಷೇಧ: ಸುಪ್ರೀಂ ನಿರ್ಧಾರಕ್ಕೆ ರಾಮ್ದೇವ್ ವಿರೋಧ

ದೀಪಾವಳಿ ಸಂದರ್ಭದಲ್ಲಿ ದೆಹಲಿ-ಎನ್ ಸಿ ಆರ್ ನಲ್ಲಿ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಯೋಗಗುರು ಬಾಬಾ ರಾಮ್ದೇವ್ ವಿರೋಧಿಸಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡಿದ ಬಾಬಾ ರಾಮ್ದೇವ್, ಹಿಂದುಗಳನ್ನು ಗುರಿಯಾಗಿಸಿಕೊಂಡು ಈ ತೀರ್ಪು ನೀಡುವುದು ತಪ್ಪು. ಸುಪ್ರೀಂ ಕೋರ್ಟ್ ಗೆ ಸರ್ಕಾರ ಮೇಲ್ಮನವಿ ಸಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.

ಎಲ್ಲವನ್ನೂ ಮಾಲಿನ್ಯದ ದೃಷ್ಟಿಯಿಂದ ನೋಡುವುದು ತಪ್ಪು. ಬೇರೆ ಸಮುದಾಯದವರ ಹಬ್ಬದಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದರೆ ಅದು ಧಾರ್ಮಿಕ ರೂಪ ತಳೆಯುತ್ತಿತ್ತು. ಯಾವುದೇ ಸಂಶಯವಿಲ್ಲ, ಇದ್ರಲ್ಲಿ ಹಿಂದುಗಳನ್ನು ಬಲಿಪಶು ಮಾಡಲಾಗಿದೆ ಎಂದು ರಾಮ್ದೇವ್ ಹೇಳಿದ್ದಾರೆ.

ಪಟಾಕಿಯಿಂದ ಮಾಲಿನ್ಯ ಹೆಚ್ಚುತ್ತದೆ ಎಂದಾದಲ್ಲಿ ಸರ್ಕಾರ 500 ಪಟಾಕಿ ಏಜೆನ್ಸಿಗಳಿಗೆ ಏಕೆ ಲೈಸೆನ್ಸ್ ನೀಡಿದೆ ಎಂದು ಬಾಬಾ ರಾಮ್ದೇವ್ ಪ್ರಶ್ನೆ ಮಾಡಿದ್ದಾರೆ. ಸರ್ಕಾರ 500 ಏಜೆನ್ಸಿಗಳಿಂದ ಪಟಾಕಿಯನ್ನು ಮೊದಲು ಖರೀದಿ ಮಾಡ್ಲಿ. ನಂತ್ರ ಯಾವುದೇ ಕ್ರಮ ಕೈಗೊಳ್ಳಲಿ ಎಂದಿದ್ದಾರೆ. ಪ್ರಗತಿಶೀಲ ಭಾರತದಲ್ಲಿ ಎಲ್ಲ ಧರ್ಮದವರನ್ನು ಒಂದೇ ರೀತಿಯಲ್ಲಿ ನೋಡಬೇಕೆಂದು ಯೋಗಗುರು ಅಭಿಪ್ರಾಯಪಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...