alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗಿ ಆದಿತ್ಯನಾಥ್ ಭೇಟಿ ಮಾಡಿದ ಯೋಗಗುರು

ಯೋಗ ಗುರು ಬಾಬಾ ರಾಮ್ದೇವ್ ಭಾನುವಾರ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದಾರೆ. ಬಾಬಾ ರಾಮ್ದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಬೆಳಿಗ್ಗೆ 9 ಗಂಟೆಗೆ ಲಕ್ನೋದ ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿದ್ದರು. ಪತಂಜಲಿ ಕಂಪನಿ ಹೂಡಿಕೆ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸಿದ್ರು.

ರಾಮ್ದೇವ್ ಭೇಟಿ ಬಗ್ಗೆ ಟ್ವೀಟರ್ ನಲ್ಲಿ ಫೋಟೋ ಹಾಕಿದ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಹೂಡಿಕೆದಾರರ ಶೃಂಗಸಭೆ-2018ರ ಬಗ್ಗೆ ಯೋಗಗುರು ಚರ್ಚೆ ನಡೆಸಿದ್ದಾರೆಂದು ಮಾಹಿತಿ ನೀಡಿದ್ದಾರೆ. ಬುಂದೇಲ್ಖಂಡ ಮತ್ತು ನೋಯ್ಡಾದಲ್ಲಿ ಪತಂಜಲಿ ಕಂಪನಿ ಹೂಡಿಕೆ ಮಾಡಲು ಬಯಸಿದೆ ಎಂದು ರಾಮ್ದೇವ್ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಹೂಡಿಕೆ ಮಾಡುವ ಬಗ್ಗೆ ಅನೇಕ ದಿನಗಳಿಂದ ರಾಮ್ದೇವ್ ಇಚ್ಛೆ ಹೊಂದಿದ್ದಾರೆ. ಹಿಂದೆ ಸಮಾಜವಾದಿ ಪಕ್ಷದ ನಾಯಕರನ್ನು ಭೇಟಿಯಾಗಿ ರಾಮ್ದೇವ್ ಮಾತುಕತೆ ನಡೆಸಿದ್ದರು. ಈಗ ಯೋಗಿ ಭೇಟಿ ಮಾಡಿದ್ದಾರೆ. ಫೆಬ್ರವರಿ 21,22 ರಂದು ಉತ್ತರ ಪ್ರದೇಶದ ಹೂಡಿಕೆದಾರರ ಶೃಂಗಸಭೆ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...