alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಬಾ ರಾಮ್ ದೇವ್ ಗೆ ವೀಸಾ ನಿರಾಕರಿಸಿದ್ದಕ್ಕೆ ಇದಂತೆ ಕಾರಣ

baba-ramdev-4673332ಯೋಗಗುರು ಬಾಬಾ ರಾಮ್ ದೇವ್, ಇಂದು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಯೋಗ ಕುರಿತಾದ ಕಾರ್ಯಕ್ರಮಗಳನ್ನು ನೀಡಿದ್ದಾರೆ. ವಿಶ್ವಸಂಸ್ಥೆಯಲ್ಲೂ ಬಾಬಾ ರಾಮ್ ದೇವ್, ಯೋಗದ ಮಹತ್ವ ಕುರಿತು ಮಾತನಾಡಿದ್ದು, ಆದರೆ ಈ ಹಿಂದೆ ಅಮೆರಿಕಾ ಅವರಿಗೆ ವೀಸಾ ನೀಡಲು ನಿರಾಕರಿಸಿತ್ತೆಂಬ ಸತ್ಯವನ್ನು ಸ್ವತಃ ಬಾಬಾ ರಾಮ್ ದೇವ್ ಅವರೇ ಬಹಿರಂಗಪಡಿಸಿದ್ದಾರೆ.

ವಿಶ್ವ ಹೂಡಿಕೆದಾರರ ಸಮ್ಮೇಳನದಲ್ಲಿ ಅನಿಲ್ ಅಂಬಾನಿ, ಗೋಪಿಚಂದ್ ಹಿಂದುಜಾ ಮೊದಲಾದ ವಾಣಿಜ್ಯೋದ್ಯಮಿಗಳ ಜೊತೆ ಪಾಲ್ಗೊಂಡಿದ್ದ ಬಾಬಾ ರಾಮ್ ದೇವ್, ಅಮೆರಿಕಾ ಪ್ರವಾಸಕ್ಕೆ ತಮಗೆ ವೀಸಾ ಸಿಗದಿರುವ ಕಾರಣವನ್ನು ಹಂಚಿಕೊಂಡಿದ್ದು, ಹಣಕಾಸು ಸಚಿವ ಅರುಣ್ ಜೇಟ್ಲಿಯವರೂ ಈ ಸಂದರ್ಭದಲ್ಲಿ ಹಾಜರಿದ್ದರು.

ತಾವು ಪ್ರಥಮವಾಗಿ ಅಮೆರಿಕಾಗೆ ಭೇಟಿ ನೀಡಲು ವೀಸಾ ಕೋರಿ ಅರ್ಜಿ ಸಲ್ಲಿಸಿದಾಗ ಅದನ್ನು ತಿರಸ್ಕರಿಸಲಾಗಿತ್ತು. ಇದಕ್ಕೆ ಕಾರಣವೇನೆಂದು ತಿಳಿದಾಗ ತಮಗೆ ಅಚ್ಚರಿಯಾಯಿತು ಎಂದ ಬಾಬಾ ರಾಮ್ ದೇವ್, ತಾವು ಬ್ಯಾಂಕ್ ಖಾತೆ ಹೊಂದಿಲ್ಲ ಹಾಗೂ ಅವಿವಾಹಿತರೆನ್ನುವ ಹಿನ್ನಲೆಯಲ್ಲಿ ವೀಸಾ ನಿರಾಕರಿಸಲಾಗಿತ್ತು ಎಂದರು. ಬಳಿಕ ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವಸಂಸ್ಥೆ ಕಾರ್ಯಕ್ರಮಕ್ಕೆ ಆಹ್ವಾನ ಬಂದಾಗ 10 ವರ್ಷಕ್ಕೆ ವೀಸಾ ನೀಡಲಾಯಿತು ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...