alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಕೀಲರ ಸಾಧನೆಗೆ ಭೇಷ್ ಎನ್ನಲೇಬೇಕು !

12299025_1057545930944008_822712228_n

ಕೆಲವರಿಗೆ ಏನನ್ನಾದರೂ ಸಾಧಿಸಬೇಕು ಎಂಬ ಛಲವಿರುತ್ತೆ. ಇದಕ್ಕೆ ಯಾವ ಅಡ್ಡಿ, ಆತಂಕ ಎದುರಾದರೂ ಸಹ ಅವರು ಎದೆಗುಂದುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ವಕೀಲ ವೃತ್ತಿಯಲ್ಲಿರುವ ಒಬ್ಬರು ‘ಯೋಗ’ ದ ಆಸನವೊಂದರಲ್ಲಿ ಗಿನ್ನಿಸ್ ದಾಖಲೆ ಮಾಡಿದ್ದಾರೆ.

ಹೌದು. ಬಿಹಾರದ ಕಟಿಹಾರ್‌‌‌ನ ನಿವಾಸಿಯಾಗಿರುವ ವಕೀಲ ಅಖಿಲೇಶ್ ಚಂದ್ರ ಯೋಗಾಭ್ಯಾಸವನ್ನು ಹವ್ಯಾಸವನ್ನಾಗಿ ಬೆಳೆಸಿಕೊಂಡು ಬಂದವರು. ಯೋಗದ ಕುರಿತಾಗಿ ಸಾಕಷ್ಟು ಆಸಕ್ತಿ ಹೊಂದಿರುವ ಇವರು ಇದೀಗ ಬರೋಬ್ಬರಿ 65 ನಿಮಿಷ ತಲೆ ಕೆಳಗೆ ನಿಂತು ಶಿರ್ಷಾಸನ ಯೋಗ ಪ್ರದರ್ಶಿಸಿ ಗಿನ್ನಿಸ್ ದಾಖಲೆಗೆ ಪಾತ್ರರಾಗಿದ್ದಾರೆ.

ವಿಶೇಷವೆಂದರೆ ಈ ಹಿಂದೆ ಅರೇಬಿಯಾದ ಸ್ಟ್ಯಾನ್ಲಿ ಅವರು 61 ನಿಮಿಷಗಳ ಕಾಲ ಶಿರ್ಷಾಸನ ಮಾಡಿ ದಾಖಲೆ ನಿರ್ಮಿಸಿದ್ದರು. ಇದೀಗ ಅಖಿಲೇಶ್, ಈ ದಾಖಲೆಯನ್ನು ಮುರಿದು ಇದನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...