alex Certify
ಕನ್ನಡ ದುನಿಯಾ       Mobile App
       

Kannada Duniya

ಐಸಿಸ್ ಸೇರಿದ್ದ ಕೇರಳ ಯುವಕನ ಹತ್ಯೆ

isis

ಕಳೆದ ವರ್ಷ ಐಎಸ್ಐಎಸ್ ಭಯೋತ್ಪಾದಕ ಸಂಘಟನೆ ಸೇರಿದ್ದ ಕೇರಳದ ಯುವಕ ಅಫ್ಘಾನಿಸ್ತಾನದಲ್ಲಿ ಹತ್ಯೆಯಾಗಿದ್ದಾನೆ. 23 ವರ್ಷದ ಮರ್ವನ್ ಇಸ್ಮಾಯಿಲ್ ತರಿಕರಿಪುರದ ನಿವಾಸಿಯಾಗಿದ್ದ. ಐಸಿಸ್ ಸೇರಬೇಕು ಅಂತಾನೇ 2016ರ ಮೇನಲ್ಲಿ ಮನೆಬಿಟ್ಟು ಹೋಗಿದ್ದ.

ಒಟ್ಟು 21 ಯುವಕರು ಉಗ್ರ ಸಂಘಟನೆ ಸೇರಲು ತೆರಳಿದ್ದರು. ಅವರಲ್ಲಿ ಮರ್ವನ್ ಕೂಡ ಒಬ್ಬ. ಆತ ಅಫ್ಘಾನಿಸ್ತಾನದ ನಂಗರ್ಹಾರ್ ಎಂಬಲ್ಲಿ ಅಡಗಿದ್ದಾನೆ ಅನ್ನೋ ಮಾಹಿತಿ ಇತ್ತು. ಈ ಪ್ರದೇಶವನ್ನು ಭಾಗಶಃ ಐಸಿಸ್ ಸಂಘಟನೆ ತನ್ನ ವಶಕ್ಕೆ ತೆಗೆದುಕೊಂಡಿತ್ತು.

ಉಗ್ರರನ್ನು ಮಟ್ಟಹಾಕಲು ನಡೆಸಿದ ಡ್ರೋನ್ ದಾಳಿಯಲ್ಲಿ ಮರ್ವನ್ ಹತನಾಗಿದ್ದಾನೆ ಅಂತಾ ಕುಟುಂಬಕ್ಕೆ ಮಾಹಿತಿ ಸಿಕ್ಕಿದೆ. ಕಳೆದ ವರ್ಷ ಐಸಿಸ್ ಸೇರಿದ್ದ ದಕ್ಷಿಣ ಭಾರತದ ಮತ್ತೊಬ್ಬ ಯುವಕ ಕೂಡ ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...