alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಪೆನ್, ದಿಂಬು, ಟೀ ಶರ್ಟ್ ಬಿಡುಗಡೆ ಮಾಡಿದ Xiaomi

ಇತ್ತೀಚೆಗಷ್ಟೆ Xiaomi ತನ್ನ ಬಜೆಟ್ ಸ್ಮಾರ್ಟ್ಫೋನ್ ರೆಡ್ಮಿ ವೈ 2 ಬಿಡುಗಡೆ ಮಾಡಿದೆ. ಈಗ ಕಂಪನಿ ಮತ್ತೆ ನಾಲ್ಕು ತನ್ನ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಈ ನಾಲ್ಕು ಉತ್ಪನ್ನಗಳು ಸ್ಮಾರ್ಟ್ಫೋನ್ ಗೆ ಸಂಬಂಧವಿಲ್ಲ. ಈಗ Xiaomi ಎಂಐ ರೋಲರ್ ಬಾಲ್ ಪೆನ್, ಎಂಐ ಟ್ರಾವಲ್ ಯು-ಶೇಪ್ಡ್ ಪಿಲ್ಲೋ, ಎಂಐ ಐ ಲವ್ ಟಿ ಶರ್ಟ್, ಎಂಐ ಬ್ಯಾಂಡ್ 2 ಹಾಗೂ ಎಂಐ ಬ್ಯಾಂಡ್ ಹೆಚ್ ಆರ್ ಎಕ್ಸ್ ಗಾಗಿ ಕೇಬಲ್ ಒಂದನ್ನು ಬಿಡುಗಡೆ ಮಾಡಿದೆ.

ಈ ಎಲ್ಲ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿದೆ. ಗ್ರಾಹಕರು Xiaomi ನ ಅಧಿಕೃತ ವೆಬ್ಸೈಟ್ ಎಂಐ ಡಾಟ್ ಕಾಮ್ ನಲ್ಲಿ ಖರೀದಿ ಮಾಡಬಹುದಾಗಿದೆ.  ಎಂಐ ರೋಲರ್ ಬಾಲ್ ಪೆನ್ ಬೆಲೆ 179 ರೂಪಾಯಿ. ಎಂಐ ಟ್ರಾವಲ್ ಯು-ಶೇಪ್ಡ್ ಪಿಲ್ಲೋ ಬೆಲೆ 999 ರೂಪಾಯಿ.

ಇನ್ನು ಎಂಐ ಐ ಲವ್ ಟಿ ಶರ್ಟ್ ಗ್ರಾಹಕರಿಗೆ 399 ರೂಪಾಯಿಗೆ ಸಿಗಲಿದೆ. ಎಂಐ ಬ್ಯಾಂಡ್ 2 ಹಾಗೂ ಎಂಐ ಬ್ಯಾಂಡ್ ಹೆಚ್ ಆರ್ ಎಕ್ಸ್ ಗಾಗಿ ಮಾರುಕಟ್ಟೆಗೆ ಬಂದ ಕೇಬಲ್ ಬೆಲೆ 129 ರೂಪಾಯಿ.

ಇತ್ತೀಚಿಗಷ್ಟೇ ಬಿಡುಗಡೆಯಾದ ರೆಡ್ಮಿ ವೈ 2 ಸ್ಮಾರ್ಟ್ಫೋನ್ ಗೆ 16 ಮೆಗಾಪಿಕ್ಸಲ್  ಕ್ಯಾಮರಾ ನೀಡಲಾಗಿದೆ. ಇದು ಎರಡು ರೂಪಾಂತರದಲ್ಲಿ ಗ್ರಾಹಕರಿಗೆ ಸಿಗ್ತಿದೆ. 3 ಜಿಬಿ ರ್ಯಾಮ್ ಹಾಗೂ 32 ಜಿಬಿ ಸ್ಟೋರೇಜ್ ಇರುವ ಮೊಬೈಲ್ ಬೆಲೆ 9,999 ರೂಪಾಯಿ. 4ಜಿಬಿ ರ್ಯಾಮ್ ಹಾಗೂ 64 ಜಿಬಿ ಸ್ಟೋರೇಜ್ ಮೊಬೈಲ್ ಬೆಲೆ 12,999 ರೂಪಾಯಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...