alex Certify
ಕನ್ನಡ ದುನಿಯಾ       Mobile App
       

Kannada Duniya

ಪವಿತ್ರ ಗಂಗೆ ಬಗ್ಗೆ ಆಘಾತಕಾರಿ ವರದಿ ನೀಡಿದ ಡಬ್ಲ್ಯೂ ಡಬ್ಲ್ಯೂ ಎಫ್

ದೇಶದ ಪವಿತ್ರ ನದಿ ಗಂಗೆಯಲ್ಲಿ ಮಿಂದೆದ್ರೆ ಪಾಪವೆಲ್ಲ ನಾಶವಾಗುತ್ತೆ ಎಂಬ ನಂಬಿಕೆ ನಮ್ಮಲ್ಲಿದೆ. ಗಂಗೆ ಬಗ್ಗೆ ಡಬ್ಲ್ಯೂ ಡಬ್ಲ್ಯೂ ಎಫ್ ಆಘಾತಕಾರಿ ವರದಿಯೊಂದನ್ನು ನೀಡಿದೆ. ದೇಶದ 2,071 ಕಿಲೋಮೀಟರ್ ಉದ್ದ ಹರಿಯುವ ನದಿ ವಿಶ್ವದ ಅತ್ಯಂತ ಅಪಾಯದಂಚಿನಲ್ಲಿರುವ ನದಿಗಳಲ್ಲಿ ಒಂದು ಎಂದು ಡಬ್ಲ್ಯೂ ಡಬ್ಲ್ಯೂ ಎಫ್ ಹೇಳಿದೆ.

ದೇಶದ ದೇವನದಿ ಎಂದೇ ಹೆಸರು ಪಡೆದಿರುವ ಗಂಗೆ ಹಿಮಾಚಲದ ಗಂಗೋತ್ರಿಯಲ್ಲಿ ಹುಟ್ಟುತ್ತದೆ. ಗಂಗಾ ನದಿಯ ಉಗಮ ಸ್ಥಳ ಸಮುದ್ರಕ್ಕಿಂತ 3140 ಮೀಟರ್ ಎತ್ತರದಲ್ಲಿದೆ. ಬಂಗಾಳಕೊಲ್ಲಿ ಸೇರುವ ಗಂಗೆ ದೇಶದ ಅನೇಕ ರಾಜ್ಯಗಳನ್ನು ಸುತ್ತಿ ಬರುತ್ತದೆ.

ದೇಶದ ಉಳಿದ ನದಿಗಳಂತೆ ಗಂಗೆಯಲ್ಲಿ ಮೊದಲು ಪ್ರವಾಹ ನಂತ್ರ ಬರ ಪರಿಸ್ಥಿತಿ ಕಾಣಿಸಲು ಶುರುವಾಗಿದೆಯಂತೆ. ಹಾಗಾಗಿ ಗಂಗೆ ಕೂಡ ಅಪಾಯದಂಚಿನಲ್ಲಿದೆ ಎಂದು ಡಬ್ಲ್ಯೂ ಡಬ್ಲ್ಯೂ ಎಫ್ ಹೇಳಿದೆ. ಇಷ್ಟೇ ಅಲ್ಲ ಗಂಗೆ ಮಲೀನ ನದಿಗಳಲ್ಲಿ ಒಂದು ಎಂದು ಡಬ್ಲ್ಯೂ ಡಬ್ಲ್ಯೂ ಎಫ್ ಹೇಳಿದೆ.

ಗಂಗೆ ಉಳಿಸಲು ಕೇಂದ್ರ ಸರ್ಕಾರ ಈಗಾಗಲೇ ಅನೇಕ ಯೋಜನೆಗಳನ್ನು ಶುರು ಮಾಡಿದೆ. ಗಂಗೆ ಸ್ವಚ್ಛತಾ ಕಾರ್ಯಕ್ರಮ ಕೂಡ ನಡೆಯುತ್ತಿದೆ. ಗಂಗೆ ಸ್ನಾನಕ್ಕೂ ಕೆಲವು ಕಡೆ ನಿಷೇಧ ಹೇರಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...