alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮನ ಬಗ್ಗೆ ಕಥೆ ಬರೆದ್ರೆ ಮೋದಿ ಸರ್ಕಾರ ನೀಡುತ್ತೆ ಬಹುಮಾನ

ನರೇಂದ್ರ ಮೋದಿ ಸರ್ಕಾರ ಜನಸಾಮಾನ್ಯರನ್ನು ಸರ್ಕಾರದ ಜೊತೆ ಜೋಡಿಸಲು ಒಂದಲ್ಲ ಒಂದು ಕಾರ್ಯಕ್ರಮಗಳನ್ನು ಶುರು ಮಾಡ್ತಿದೆ. ಈಗ ಮತ್ತೆರಡು ಹೊಸ ಕಾರ್ಯಕ್ರಮಗಳ ವಿವರಗಳನ್ನು ಸರ್ಕಾರ, ಜನರ ಮುಂದಿಟ್ಟಿದೆ. ಮನೆಯಲ್ಲಿಯೇ ಕುಳಿತು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಣ ಗಳಿಸುವ ಅವಕಾಶ ನಿಮಗೆ ಲಭ್ಯವಾಗಲಿದೆ.

ಮನೆಯೇ ಮೊದಲ ಪಾಠ ಶಾಲೆ. ಅಮ್ಮನೇ ಮೊದಲ ಗುರು. ಅಮ್ಮನಿಂದ ಪ್ರತಿಯೊಬ್ಬರು ಜೀವನ ನಿರ್ವಹಣೆಯಿಂದ ಹಿಡಿದು ಅನೇಕ ವಿಷ್ಯಗಳನ್ನು ಕಲಿತಿರುತ್ತಾರೆ. ಅಮ್ಮನಿಂದ ನೀವು ಏನನ್ನು ಕಲಿತಿದ್ದೀರಿ ಎಂಬುದನ್ನು 200 ಶಬ್ಧಗಳಲ್ಲಿ ಹೇಳಬೇಕು. ಅಮ್ಮನ ಬಗ್ಗೆ ಅತ್ಯುತ್ತಮ ಲೇಖನವನ್ನು ನೀವು ಬರೆದ್ರೆ ನಿಮಗೆ 2 ಸಾವಿರ ರೂಪಾಯಿ ಬಹುಮಾನ ರೂಪದಲ್ಲಿ ಸಿಗಲಿದೆ.

ಮೋದಿ ಸರ್ಕಾರ #LikeYouDoMaa: Mother’s Day Contest ಆಯೋಜನೆ ಮಾಡಿದೆ. ಈ ಕಾರ್ಯಕ್ರಮದಡಿ ನೀವು ಅಮ್ಮನ ಬಗ್ಗೆ ನಿಮಗಿರುವ ಭಾವನೆಗಳನ್ನು ಶಬ್ಧದಲ್ಲಿ ಹೇಳುವ ಅವಕಾಶ ಸಿಕ್ಕಿದೆ. ಮೇ 20 ರವರೆಗೆ ನಿಮಗೆ ಅಮ್ಮನ ಬಗ್ಗೆ ಲೇಖನ ಬರೆಯಲು ಅವಕಾಶವಿದೆ.

https://www.mygov.in/task/likeyoudomaa-mothers-day-contest ಕ್ಲಿಕ್ ಮಾಡಿ ಕಮೆಂಟ್ ಬಾಕ್ಸ್ ನಲ್ಲಿ ನೀವು ಕಥೆಯನ್ನು ಬರೆಯಬೇಕು. ಆಯುಷ್ಮಾನ್ ಭಾರತ್ ಯೋಜನೆಯಡಿ ಹೆಲ್ತ್ ಅಂಡ್ ವೆಲ್ನೆಸ್ ಸೆಂಡರ್ ಗೆ ಹೆಸರಿಡುವುದಾಗಿದೆ. ಹಿಂದಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಹೆಸರನ್ನು ನಮೂದಿಸಬೇಕು. ಇದಕ್ಕೆ ಮೇ 14 ಕೊನೆ ದಿನ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...