alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 830 ರೂಪಾಯಿಗೆ ‘ಭಾರತ ದರ್ಶನ’

indian-rail-chukchukಭಾರತೀಯ ರೈಲ್ವೇಯ ಐ.ಆರ್.ಸಿ.ಟಿ.ಸಿ. ಆಯೋಜಿಸುವ ‘ಭಾರತ ದರ್ಶನ’ ಪ್ಯಾಕೇಜ್ ದರವನ್ನು ಕಡಿತಗೊಳಿಸಲಾಗಿದ್ದು, ಒಬ್ಬ ಪ್ರಯಾಣಿಕರಿಗೆ ಪ್ರತಿ ದಿನಕ್ಕೆ ಕೇವಲ 830 ರೂ. ವೆಚ್ಚ ತಗುಲಲಿದೆ. ಇದರಲ್ಲಿ ಊಟ, ವಸತಿ ಸೌಲಭ್ಯವೂ ಸೇರಿದೆ.

ದೇಶದ ಪ್ರಮುಖ ಯಾತ್ರಾ ಸ್ಥಳಗಳಾದ ಜಗನ್ನಾಥ ಪುರಿ, ಜ್ಞಾನಸಾಗರ್,ಬೈದ್ಯನಾಥ್ ಧಾಮ್, ಗಯಾ, ಬನಾರಸ್, ಆಯೋಧ್ಯ ಸೇರಿದಂತೆ ಹಲವು ಸ್ಥಳಗಳಿಗೆ 10 ಬೋಗಿಗಳನ್ನು ಹೊಂದಿರುವ ಈ ರೈಲು ಸಂಚರಿಸುತ್ತದೆ.

ರೈಲಿನಲ್ಲಿ ಪರಿಣಿತ ಟೂರ್ ಮ್ಯಾನೇಜರ್ ಗಳಿರುತ್ತಾರಲ್ಲದೇ ರೈಲಿನಲ್ಲಿಯೇ ತುರ್ತು ಚಿಕಿತ್ಸೆ ಸೌಲಭ್ಯವೂ ಇರುತ್ತದೆ. ಪ್ರವಾಸದ ಅವಧಿಯಲ್ಲಿ ಊಟ, ವಸತಿಯಲ್ಲದೇ ರೈಲು ನಿಲ್ದಾಣದಿಂದ ಪ್ರವಾಸಿ ಸ್ಥಳಕ್ಕೆ ತೆರಳಲು ಬಸ್ ನ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಒಬ್ಬ ಪ್ರವಾಸಿಗನಿಗೆ ದಿನವೊಂದಕ್ಕೆ ತಗಲುವ 830 ರೂ. ನಲ್ಲಿದೆ ಈ ಎಲ್ಲ ವೆಚ್ಚವೂ ಅಡಕವಾಗಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...