alex Certify
ಕನ್ನಡ ದುನಿಯಾ       Mobile App
       

Kannada Duniya

ಹರಾಜಿಗಿದೆ ಆ್ಯಪಲ್ ಶೂ, ಬೆಲೆ ಕೇಳಿದ್ರೆ ದಂಗಾಗ್ತೀರಾ..!

apple

ಸ್ಟೇಟಸ್ ಮೆಂಟೇನ್ ಮಾಡ್ಬೇಕು ಅಂದ್ರೆ ಆ್ಯಪಲ್ ಡಿವೈಸ್ ಗಳನ್ನು ಇಟ್ಕೋಬೇಕು ಅನ್ನೋದು ಹಲವರ ಅಭಿಪ್ರಾಯ. ಐಫೋನ್, ಮ್ಯಾಕ್ ಬುಕ್, ಐಪಾಡ್, ಆ್ಯಪಲ್ ವಾಚ್ ಹೀಗೆ ಆ್ಯಪಲ್ ಬ್ರಾಂಡ್ ನ ವಸ್ತುಗಳಿದ್ರೆ ಅದೊಂಥರಾ ಪ್ರತಿಷ್ಠೆ.

ಈಗ ಅಪರೂಪದ ಆ್ಯಪಲ್ ಶೂ ಕೂಡ ನೀವು ಖರೀದಿಸಬಹುದು. ಆನ್ ಲೈನ್ ವೆಬ್ ಸೈಟ್ e-Bayನಲ್ಲಿ ಹಳೆಯ ಮಾಡೆಲ್ ನ ಆ್ಯಪಲ್ ಬೂಟುಗಳನ್ನು ಹರಾಜಿಗೆ ಇಡಲಾಗ್ತಿದೆ. ತುಂಬಾ ಹಿಂದೆಯೇ ತಯಾರಿಸಲಾದ ಅಚ್ಚ ಬಿಳಿಯ ಬಣ್ಣದ ಬೂಟುಗಳಿವು. ಅದರ ಮೇಲೆ ಕಾಮನಬಿಲ್ಲಿನ ಬಣ್ಣದ ಆ್ಯಪಲ್ ಲೋಗೋ ಕೂಡ ಇದೆ.

ಆ್ಯಪಲ್ ಉದ್ಯೋಗಿಗಳಿಗೆ ಈ ಬೂಟನ್ನು ಕೊಡಲಾಗ್ತಿತ್ತು. ಸದ್ಯ e-Bayನಲ್ಲಿ ಹರಾಜಿಗಿರುವ ಒಂದು ಜೊತೆ ಶೂ ಬೆಲೆ 15,000 ಡಾಲರ್. ಅದರ ಮೌಲ್ಯ 30,000 ಡಾಲರ್ ಅಂತೆ. ಹರಾಜಿನಲ್ಲಿ ಅದಕ್ಕಿಂತ ಹೆಚ್ಚಿನ ಬೆಲೆಗೇ ಶೂ ಮಾರಾಟವಾದ್ರೂ ಅಚ್ಚರಿಯಿಲ್ಲ. ಕಳೆದ ವರ್ಷ ಸ್ಟೀವ್ ಜಾಬ್ಸ್ ಅವರ ಲೆದರ್ ಜಾಕೆಟ್ 22,000 ಡಾಲರ್ ಗೆ ಬಿಕರಿಯಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...