alex Certify
ಕನ್ನಡ ದುನಿಯಾ       Mobile App
       

Kannada Duniya

ಐಕೆಇಎಯಲ್ಲಿ ತಿಂದ ವೆಜ್ ಬಿರಿಯಾನಿಯಲ್ಲಿ ಇದೂ ಇತ್ತು…!

ಐಕೆಇಎ ಸ್ಟೋರ್‌ನಲ್ಲಿ ವೆಜಿಟೇಬಲ್‌ ಬಿರಿಯಾನಿ ಆರ್ಡರ್‌ ಮಾಡಿದ ವ್ಯಕ್ತಿಯೋರ್ವ ಅದರಲ್ಲಿ ಹುಳ ಇದ್ದದ್ದನ್ನು ಕಂಡಿದ್ದಾನೆ. ಈ ಸಂಬಂಧ ಐಕೆಇಎಗೆ ಗ್ರೇಟರ್‌ ಹೈದರಾಬಾದ್ ಮುನ್ಸಿಪಲ್‌ ಕಾರ್ಪೊರೇಷನ್ ನೋಟಿಸ್‌ ಜಾರಿಗೊಳಿಸಿದ್ದು, 11,500 ರೂ. ದಂಡ ವಿಧಿಸಿದೆ.

ತ್ಯಾಜ್ಯ ವಿಂಗಡನೆ ಮಾಡದೇ ಇರುವುದು, ನಿಯಮಗಳನ್ನು ಪಾಲಿಸದಿರುವುದು ಹಾಗೂ ಪ್ಲಾಸ್ಟಿಕ್‌ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ದಂಡ ಹಾಕಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಐಕೆಇಎನಲ್ಲಿ ಆರ್ಡರ್‌ ಮಾಡಿದ ವೆಜಿಟೇಬಲ್‌ ಬಿರಿಯಾನಿಯಲ್ಲಿ ಹುಳ ಕಂಡಿದ್ದನ್ನು ವ್ಯಕ್ತಿಯೋರ್ವ ಸಾಮಾಜಿಕ ತಾಣದಲ್ಲಿ ಫೋಟೋ ಹಾಕಿದ್ದು, ವೈರಲ್ ಆಗಿತ್ತು. ಈ ಸಂಬಂಧ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ, ನಿಯಮಾನುಸಾರ ಕ್ರಮ ಕೈಗೊಂಡಿದ್ದಾರೆ.

ಕಳೆದ ತಿಂಗಳು ಭಾರತದ ಮೊದಲ ಔಟ್‌ಲೆಟ್‌ ಆಗಿ ಇದು ಕಾರ್ಯಾರಂಭ ಮಾಡಿತ್ತು. ಘಟನೆ ಬಗ್ಗೆ ಸಂಸ್ಥೆಯ ವಕ್ತಾರ ವಿಷಾದ ವ್ಯಕ್ತಪಡಿಸಿದ್ದು, ಮುಂದಿನ ದಿನದಲ್ಲಿ ಹೀಗಾಗದಂತೆ ಎಚ್ಚರ ವಹಿಸುವುದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...