alex Certify
ಕನ್ನಡ ದುನಿಯಾ       Mobile App
       

Kannada Duniya

ಆರ್ಥಿಕ ಸಂಕಷ್ಟದಲ್ಲಿದೆ ಸಂಸ್ಕೃತ ಪತ್ರಿಕೆ…!

ವಿಶ್ವದ ಏಕೈಕ ಸಂಸ್ಕೃತ ಭಾಷೆಯ ಸುಧರ್ಮ ಪತ್ರಿಕೆ ಇಂದು ಅವನತಿಯ ಅಂಚಿನಲ್ಲಿದೆ. ಸುವರ್ಣ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಹಣದ ಕೊರತೆಯನ್ನ ಎದುರಿಸುತ್ತಿರುವ ಈ ಪತ್ರಿಕೆ ಸಂಕಷ್ಟದಲ್ಲಿದೆ.

ಸಂಸ್ಕೃತ ಭಾಷೆಯನ್ನ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಆರಂಭಗೊಂಡ ಈ ಪತ್ರಿಕೆಯ ಪಿತಾಮಹ ಪಂಡಿತ್ ವರದರಾಜ್ ಅಯ್ಯಂಗಾರ್, 1970 ರಂದು ಆರಂಭಗೊಂಡ ಈ ಪತ್ರಿಕೆ ಇಂದು ಪತ್ರಿಕೆಯನ್ನ ನಡೆಸಲು ಸಾಧ್ಯವಾಗದಂತಹ ಸ್ಥಿತಿ ತಲುಪಿರುವುದರಿಂದ ಸರ್ಕಾರದ ಎದುರು ಸಹಾಯ ಕೋರಿದೆ.

ಅಯ್ಯಂಗಾರ್ ಅವರು 1945 ರಲ್ಲಿ ಪ್ರಿಂಟಿಂಗ್ ಪ್ರೆಸ್ ವೊಂದನ್ನ ಆರಂಭಿಸಿದರು. ಸರ್ಕಾರಿ ಗೆಜೆಟ್ ಗಳು, ಸಂಸ್ಕೃತ ಮತ್ತು ಕನ್ನಡ ಪ್ರಶ್ನೆ ಪತ್ರಿಕೆಗಳನ್ನೂ ಸಹ ಈ ಪ್ರಿಂಟಿಂಗ್ ಪ್ರೆಸ್ ನಲ್ಲಿ ಸಿದ್ದಪಡಿಸಲಾಗುತ್ತಿತ್ತು‌.

1000 ಪ್ರತಿಯನ್ನ ಅಚ್ಚು ಒತ್ತುತ್ತಿದ್ದ ಪತ್ರಿಕೆ ಇಂದು 3500 ಪ್ರತಿಗಳನ್ನು ಅಚ್ಚುಹಾಕುತ್ತಿದೆ. ಎ3 ಅಳತೆಯ ಈ ಪತ್ರಿಕೆ ಐದು ಕಾಲಂ ಅನ್ನ ಹೊಂದಿದೆ. ಎರಡು ಪುಟಗಳ ಈ ಪತ್ರಿಕೆಗೆ ಆರಂಭದಲ್ಲಿ ತಿಂಗಳಿಗೆ ಚಂದಾದಾರಾಗಲು 1 ರೂ. ನಿಗದಿಪಡಿಸಲಾಗಿತ್ತು. ಆದರೆ ಇಂದು ವರ್ಷಕ್ಕೆ 500 ರೂ. ಆಗಿದೆ.

ಅಯ್ಯಂಗಾರ್ ಅವರ ಮಗ ಕೆ.ವಿ. ಸಂಪತ್ ಈ ಪತ್ರಿಕೆಯನ್ನ ಮುಂದುವರೆಸಿದ್ದಾರೆ. 2009 ರಲ್ಲಿ ಸುಧರ್ಮದ ಇ-ಪತ್ರಿಕೆ ಆರಂಭಿಸಿತು. ಈಗಲೂ ಪತ್ರಿಕೆಯನ್ನ ಸಂಪತ್ ಉಳಿಸಿಕೊಂಡು ಬಂದಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇದಕ್ಕೆ ಚಂದಾದಾರರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮುಂದುವರೆಯಲಿದೆಯಾ ದೋಸ್ತಿ ಸರ್ಕಾರ...?

    View Results

    Loading ... Loading ...