alex Certify
ಕನ್ನಡ ದುನಿಯಾ       Mobile App
       

Kannada Duniya

ಕೈಬರಹದ ದಿನಪತ್ರಿಕೆಯ ಬೆಲೆ ಎಷ್ಟು ಗೊತ್ತಾ…?

ಇಂದಿನ ಟೆಕ್ನಾಲಜಿ ಯುಗದಲ್ಲಿಯೂ ಕೈಬರಹದ ದಿನಪತ್ರಿಕೆಯೊಂದು ಇಂದಿಗೂ ಜನರ ಕೈಸೇರುತ್ತಿದೆ. 91 ವರ್ಷ ಹಳೆಯದಾದ ಈ ದಿನಪತ್ರಿಕೆ 75 ಪೈಸೆಗೆ ಮಾರಾಟವಾಗುತ್ತಿದೆ.

ಅಂದಹಾಗೆ ಈ ಪತ್ರಿಕೆ ಶುರುವಾಗಿದ್ದು 1927 ರಲ್ಲಿ. ಸೈಯ್ಯದ್ ಅವರ ಅಜ್ಜ ಈ ಪತ್ರಿಕೆ ಶುರುಮಾಡಿದ್ದರಂತೆ. ಈ ಪತ್ರಿಕೆಯ ಮುಖ್ಯ ಕಛೇರಿ ಚೆನ್ನೈನಲ್ಲಿದ್ದು, ಸೈಯ್ಯದ್ ಅರಿಫುಲ್ಲಾಹ್ ಎಂಬುವವರು ಈಗ ಈ ಪತ್ರಿಕೆಯನ್ನು ನಡೆಸುತ್ತಿದ್ದಾರೆ. ಬೆಳಗ್ಗೆ 10 ಗಂಟೆಗೆ ಕಚೇರಿ ತೆರೆದರೆ ಎಲ್ಲಾ ಸುದ್ದಿಗಳನ್ನು ಬರೆದು ಸುಮಾರು 1 ಗಂಟೆಗೆ ಪ್ರಿಂಟ್ ಗೆ ಹೋಗುತ್ತೆ. ಸಾಯಂಕಾಲದೊಳಗೆ 21 ಸಾವಿರ ಓದುಗರ ಕೈಸೇರುತ್ತೆ ಈ ಪತ್ರಿಕೆ.

ಇದು ಜಗತ್ತಿನ ಏಕೈಕ ಕೈ ಬರಹದ ದಿನಪತ್ರಿಕೆ ಹಾಗೂ ಅತ್ಯಂತ ಕಡಿಮೆ ಬೆಲೆಯ ಸುದ್ದಿ ಪತ್ರಿಕೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...