alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಅತಿ ಉದ್ದದ ಗುಹೆ ಎಲ್ಲಿದೆ ಗೊತ್ತಾ…?

ಜಗತ್ತಿನ ಅತಿ ಉದ್ದದ ಮರಳುಗಲ್ಲಿನ ಗುಹೆ ಮೇಘಾಲಯದಲ್ಲಿ ಪತ್ತೆಯಾಗಿದೆ. ಕ್ರೆಮ್ ಪುರಿ ಎನ್ನುವ ಗುಹೆ 24583 ಮೀಟರ್ ಉದ್ದವಿದೆ. ಈ ಗುಹೆ 2016 ರಲ್ಲೇ ಪತ್ತೆಯಾಗಿದ್ದರೂ ಅದರ ನಿಜವಾದ ಉದ್ದ ಎಷ್ಟು ಅನ್ನೋದು ಇದೀಗ ಸ್ಪಷ್ಟವಾಗಿದೆ.

ಈ ಗುಹೆ ಎಷ್ಟು ಉದ್ದ ಹಾಗೂ ದೊಡ್ಡದಿದೆ ಅಂದರೆ ಯಾರಾದರೂ ಇಲ್ಲಿ ಕಳೆದುಹೋದರೆ ಹೊರಗೆ ಬರೋದು ಅಷ್ಟು ಸುಲಭವಲ್ಲ.

ಈವರೆಗೂ ಎಡೋ ಜೂಲಿಯಾದಲ್ಲಿರೋ ಕೇವಾ ಡೆಲ್ ಸಮನ್ ಎನ್ನುವ ಗುಹೆ ವಿಶ್ವದ ಅತಿ ಉದ್ದದ ಗುಹೆ ಎನ್ನುವುದಾಗಿ ಕರೆಯಲ್ಪಟ್ಟಿತ್ತು. ಆದರೆ ಈಗ ಕ್ರೆಮ್ ಪುರಿ ಗುಹೆ ಆ ಗುಹೆಗಿಂತ 6 ಸಾವಿರ ಮೀಟರ್ ಉದ್ದವಿದೆ ಎಂಬುದಾಗಿ ತಿಳಿಯಲ್ಪಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...