alex Certify
ಕನ್ನಡ ದುನಿಯಾ       Mobile App
       

Kannada Duniya

ಜಗ್ಗದ ಬಗ್ಗದ ವಿಶ್ವದ ಎತ್ತರದ ರೈಲ್ವೇ ಸೇತುವೆ ಬಹುತೇಕ‌ ಪೂರ್ಣ

ಸುಮಾರು 30 ಕೆಜಿ ಗಾತ್ರದ ಸ್ಪೋಟಕ‌ ಒಮ್ಮೆಲೆ ಸ್ಪೋಟಗೊಂಡರೂ, ಪ್ರಬಲ‌ ಭೂಕಂಪವಾದರೂ ಜಗ್ಗದ ರೈಲ್ವೇ ಸೇತುವೆ ಕಾರ್ಯ ಬಹುತೇಕ‌ ಪೂರ್ಣಗೊಂಡಿದೆ.

ಹೌದು, ಜಮ್ಮು ಕಾಶ್ಮೀರದ ಚೆನ್ನಾಬ್ ನದಿಗೆ ಅಡ್ಡಲಾಗಿ ಕಟ್ಠಿರುವ ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆ ಮುಂದಿನ ಮೇ ವೇಳೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದು, ಈ ಸೇತುವೆ ವಿಶ್ವ ಪ್ರಸಿದ್ಧ ಐಫಲ್ ಟವರ್ ಗಿಂತ 35 ಮೀಟರ್‌ ಎತ್ತರದಲ್ಲಿದೆ.

ಉದಾಮ್ ಪುರ – ರೈಸಿ, ಅನಂತನಾಗ್ – ಶ್ರೀನಗರ – ಬಾರಾಮುಲ್ಲವನ್ನು ಸಂಪರ್ಕಿಸಲು ಸುಮಾರು 1250 ಕೋಟಿ ವೆಚ್ಚದಲ್ಲಿ 1315 ಮೀಟರ್ ಉದ್ದದ ಈ ಸೇತುವೆ,‌ ಚೆನಾಬ್‌ ನದಿ ಭಾಗದ 476 ಮೀಟರ್ ಸ್ಟೀಲ್ ಆರ್ಚ್ ನಿರ್ಮಾಣಗೊಳ್ಳುತ್ತಿದ್ದು, ಇದು ನದಿಯಿಂದ 359 ಅಡಿ‌ ಎತ್ತರದಲ್ಲಿದೆ‌ ಎಂದು ತಿಳಿದುಬಂದಿದೆ.

ಯಾವುದೇ ವಿಧ್ವಂಸಕ ಕೃತ್ಯ ಅಥವಾ ಪ್ರಕೃತಿ ವಿಕೋಪಕ್ಕೆ ಸೇತುವೆ ಹಾಳಾಗದಂತೆ ಪ್ರಬಲವಾಗಿ ನಿರ್ಮಿಸಲಾಗಿದ್ದು,‌ 8 ಮ್ಯಾಗ್ನಿಟ್ಯೂಡ್ ನ ಭೂಕಂಪನ ಹಾಗೂ‌ 30 ಕೆಜಿ ಸ್ಪೋಟಕದ ತೀವ್ರತೆಯನ್ನು ತಗೆದುಕೊಳ್ಳುವ ಶಕ್ತಿಯಿದೆ. 2004 ರಲ್ಲಿಯೇ ಈ ಯೋಜನೆಗೆ ರೈಲ್ವೇ ಇಲಾಖೆ ಚಾಲನೆ ನೀಡಿದ್ದರೂ, ಸುರಕ್ಷತಾ ‌ದೃಷ್ಠಿಯಿಂದ ಕೈಬಿಡಲಾಗಿತ್ತು. ಆದರೆ ನ.5 2017 ರಲ್ಲಿ ಮತ್ತೆ ಆರಂಭಿಸಿದ್ದ ಈ‌ ಯೋಜನೆಯನ್ನು ಮುಂದಿನ ವರ್ಷ ಪೂರ್ಣಗೊಳಿಸುವ‌ ವಿಶ್ವಾಸದಲ್ಲಿ ಎಂಜಿನಿಯರ್ ಗಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...