alex Certify
ಕನ್ನಡ ದುನಿಯಾ       Mobile App
       

Kannada Duniya

242 ಕೆಜಿ ತೂಕ ಕಡಿಮೆ ಮಾಡಿಕೊಂಡ ದಢೂತಿ ಮಹಿಳೆ

fat-jpg_1491976081_749x421

ವಿಶ್ವದ ಅತ್ಯಂತ ದಢೂತಿ ಮಹಿಳೆ ಈಜಿಪ್ಟ್ ನ ಎಮಾನ್ ಅಹ್ಮದ್ ತೂಕದಲ್ಲಿ ಭಾರೀ ಇಳಿಕೆಯಾಗಿದೆ. ಇಮಾನ್ ತೂಕವನ್ನು 242 ಕೆ.ಜಿ. ಇಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ಮುಂಬೈ ಆಸ್ಪತ್ರೆಯಲ್ಲಿ ಎಮಾನ್ ಗೆ ಚಿಕಿತ್ಸೆ ನಡೆಯುತ್ತಿದೆ. ಫೆಬ್ರವರಿ 11ರಂದು ಎಮಾನ್ ಈಜಿಪ್ಟ್ ನಿಂದ ಭಾರತಕ್ಕೆ ಬಂದಿಳಿದಿದ್ದರು. ಎಮಾನ್ ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಈವರೆಗೆ ಎಮಾನ್ 242 ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆಂದು ಮಾಹಿತಿ ನೀಡಿದ್ದಾರೆ. ಸದ್ಯ ನಡೆದಾಡಲು ಪ್ರಯತ್ನ ನಡೆಸುತ್ತಿದ್ದಾಳೆ ಎಮಾನ್. ಭಾರತಕ್ಕೆ ಬಂದಾಗ ಎಮಾನ್ ತೂಕ 500 ಕೆ.ಜಿ. ಇತ್ತು.

ಶಸ್ತ್ರಚಿಕಿತ್ಸೆ ನಂತ್ರ ಅರ್ಧದಷ್ಟು ತೂಕ ಇಳಿದಿದೆ. ಶಸ್ತ್ರಚಿಕಿತ್ಸೆ ನಂತ್ರ ಪ್ರತಿದಿನ ಎರಡು ಗಂಟೆ ಫಿಜಿಯೋಥೆರಪಿ ನೀಡಲಾಗ್ತಿದೆಯಂತೆ. ಹಾಗಾಗಿ ತೂಕದಲ್ಲಿ ಮತ್ತಷ್ಟು ಇಳಿಕೆ ಕಾಣ್ತಾ ಇದೆ. ಮಾರ್ಚ್ 7 ರಂದು ಶಸ್ತ್ರಚಿಕಿತ್ಸೆ ನಡೆದಿತ್ತು. ಅರ್ಧ ಗಂಟೆ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಹೊಟ್ಟೆಯ ಗಾತ್ರವನ್ನು ಶೇಕಡಾ 75ರಷ್ಟು ಕಡಿಮೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆಗೂ ಮುನ್ನವೇ 120 ಕೆ.ಜಿ. ತೂಕ ಕಡಿಮೆಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...