alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಕಾ ಸೋಂಕಿಗೆ ಔಷಧ ಕಂಡು ಹಿಡಿದ ಭಾರತ !!

zika-mosquito-afp_650x400_81453530247

ಜಗತ್ತಿನಲ್ಲಿಯೇ ಆತಂಕಕ್ಕೆ ಕಾರಣವಾಗಿರುವ ಜಿಕಾ ಸೋಂಕು ಎಂಬ ಮಾರಕ ರೋಗಕ್ಕೆ ವಿಶ್ವದ ಪ್ರಥಮ ಔಷಧವನ್ನು ತಾನು ತಯಾರಿಸಿರುವುದಾಗಿ ಭಾರತದ ಸಂಸ್ಥೆಯೊಂದು ಪ್ರತಿಪಾದಿಸಿದ್ದು, ಅಚ್ಚರಿಗೆ ಕಾರಣವಾಗಿದೆ.

ಹೌದು. ಈಗಾಗಲೇ ಪಾಶ್ಚಿಮಾತ್ಯ ದೇಶಗಳು ಜಿಕಾ ಸೋಂಕಿನಿಂದ ನರಳುತ್ತಿದ್ದು ಮಾತ್ರವಲ್ಲ, ಕೆಲವೆಡೆ ತುರ್ತು ಪರಿಸ್ಥಿತಿಯನ್ನೂ ಘೋಷಿಸಲಾಗಿದೆ. ಅಲ್ಲದೇ ಈಗಾಗಲೇ ಜಿಕಾಗೆ ಸದ್ಯಕ್ಕೆ ಯಾವುದೇ ಔಷಧ ಇಲ್ಲದ ಕಾರಣ ಮುಂಜಾಗ್ರತೆ ವಹಿಸುವಂತೆ ವಿಶ್ವಸಂಸ್ಥೆ ಸೂಚನೆ ನೀಡಿತ್ತು.

ಇದರ ಬೆನ್ನಲ್ಲಿಯೇ ಭಾರತದ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್ ​ನ್ಯಾಷನಲ್ ಲಿಮಿಟೆಡ್, ಮಾರಕ ಜಿಕಾ ರೋಗಕ್ಕೆ ಔಷಧಿ ಕಂಡು ಹಿಡಿದಿರುವುದಾಗಿ ಪ್ರತಿಪಾದಿಸಿದ್ದು ಇದಕ್ಕೆ ಸಂಬಂಧಿಸಿದ ಪೇಟೆಂಟ್ ಸಹ ಪಡೆದಿದೆ.

ವಿಶೇಷವೆಂದರೆ ವಿದೇಶದಿಂದ ಆಮದು ಮಾಡಿಕೊಂಡ ಜೀವಂತ ಜಿಕಾ ವೈರಸ್ ಮಾದರಿ ಪರೀಕ್ಷಿಸಿ ಎರಡು ರೀತಿಯ ಲಸಿಕೆಗಳನ್ನು ಸಿದ್ದಪಡಿಸಿದ್ದು, ಭಾರತ ಸರ್ಕಾರ ಹಾಗೂ ಭಾರತ ವೈದ್ಯಕೀಯ ಸಂಶೋಧನಾ ಪ್ರಾಧಿಕಾರದಿಂದ ಹೆಚ್ಚಿನ ನೆರವು ನಿರೀಕ್ಷೆಯಲ್ಲಿದೆ. ಅನುಮತಿ ದೊರೆತ ನಂತರ 4 ತಿಂಗಳಲ್ಲಿ ಲಕ್ಷಕ್ಕೂ ಅಧಿಕ ಲಸಿಕೆಗಳನ್ನು ಸಿದ್ದಪಡಿಸಿ ರೋಗ ಪೀಡಿತ ರಾಷ್ಟ್ರಗಳಿಗೆ ರವಾನಿಸುವುದಾಗಿ ಕಂಪನಿಯ ವ್ಯವಸ್ಥಾಪಕರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...