alex Certify
ಕನ್ನಡ ದುನಿಯಾ       Mobile App
       

Kannada Duniya

ವರ್ಲ್ಡ್ ಫುಡ್ ಇಂಡಿಯಾ ಫೆಸ್ಟ್ : ಗ್ಲೋಬಲ್ ಆಗಲಿದೆ ಭಾರತದ ಖಿಚಡಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ವರ್ಲ್ಡ್ ಫುಡ್ ಇಂಡಿಯಾ ಫೆಸ್ಟಿವಲ್ ಗೆ ಚಾಲನೆ ನೀಡಿದ್ದಾರೆ. ಪ್ರಧಾನ ಮಂತ್ರಿ ಮೋದಿ ಖಿಚಡಿಯನ್ನು ದೇಶದ ಅತ್ಯಂತ ಮೆಚ್ಚಿನ ಆಹಾರವೆಂದು ವಿಶ್ವದ ಮುಂದಿಟ್ಟಿದ್ದಾರೆ. ಇದೇ ಮೊದಲ ಬಾರಿ ಮೋದಿ ಸರ್ಕಾರ ಇಷ್ಟು ದೊಡ್ಡ ಮಟ್ಟದಲ್ಲಿ ಭಾರತದ ಆಹಾರವನ್ನು ಪ್ರಚಾರ ಮಾಡುತ್ತಿದೆ.

ಫುಡ್ ಇಂಡಿಯಾ ಉದ್ಘಾಟನೆ ನಂತ್ರ ಮಾತನಾಡಿದ ಮೋದಿ,ಕೃಷಿಕರನ್ನು ನಾವು ಅನ್ನದಾತರೆಂದು ಕರೆಯುತ್ತೇವೆ. ಮುಂದಿನ ಐದು ವರ್ಷದಲ್ಲಿ ಅವರ ಆದಾಯವನ್ನು ದ್ವಿಗುಣಗೊಳಿಸುವುದು ನಮ್ಮ ಗುರಿ ಎಂದಿದ್ದಾರೆ. ಮೆಘಾ ಫುಡ್ ಪಾರ್ಕ್ ಬಗ್ಗೆ ಸರ್ಕಾರ ಯೋಜನೆ ರೂಪಿಸುತ್ತಿದೆ. ಇದನ್ನು ಕೃಷಿ ಕ್ಷೇತ್ರದ ಜೊತೆ ಜೋಡಿಸಿ ಆಲೂಗಡ್ಡೆ,ಸೇಬು,ಅನಾನಸ್ ಉತ್ಪನ್ನಗಳ ಉತ್ಪಾದನೆಯಲ್ಲಿ ಲಾಭ ತರುವ ಗುರಿಯಿದೆ ಎಂದಿದ್ದಾರೆ.

ಈ ಫೆಸ್ಟಿವಲ್ ನಲ್ಲಿ 70 ದೇಶದ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ವಿಜ್ಞಾನ ಭವನದಲ್ಲಿ ಮೂರುದಿನಗಳ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.ಇಂದು ಇಂಡಿಯಾ ಗೇಟ್ ಬಳಿ ಸಂಜೀವ್ ಕಪೂರ್ 800 ಕಿಲೋಗ್ರಾಮ್ ಖಿಚಡಿ ತಯಾರಿಸುತ್ತಿದ್ದಾರೆ. ಇದಕ್ಕಾಗಿ ಸಾವಿರ ಲೀಟರ್ ನೀರು ಹಿಡಿಯುವ ಕಡಾಯಿ ಬಳಸಲಾಗುತ್ತಿದೆ. ಸಂಜೀವ್ ಕಪೂರ್ ಗೆ 50 ಮಂದಿ ಸಹಾಯ ಮಾಡುತ್ತಿದ್ದಾರೆ. ಇದನ್ನು 60 ಸಾವಿರ ಅನಾಥ ಮಕ್ಕಳಿಗೆ ಹಂಚಲು ನಿರ್ಧರಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...