alex Certify
ಕನ್ನಡ ದುನಿಯಾ       Mobile App
       

Kannada Duniya

”ಅಲ್ಪಸಂಖ್ಯಾತರು ಮತ ಹಾಕದೇ ಇದ್ರೂ ಚುನಾವಣೆಯಲ್ಲಿ ಸೋಲುವುದಿಲ್ಲ”

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆಗೊಂಡಿರುವ ಗೋಧ್ರಾ ಶಾಸಕ ಸಿ.ಕೆ. ರೌಲ್ಜಿ ಬಿಜೆಪಿ ಸೇರ್ಪಡೆಗೆ ಸಜ್ಜಾಗಿದ್ದಾರೆ. ಬಿಜೆಪಿ ಸೇರ್ಪಡೆಯಿಂದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಭವಿಷ್ಯಕ್ಕೇನೂ ಧಕ್ಕೆಯಿಲ್ಲ ಅಂತಾ ರೌಲ್ಜಿ ಹೇಳಿದ್ದಾರೆ.

ಮೊದಲು ನಾನು ಜೆಡಿಯುನಲ್ಲಿದ್ದೆ, ಆಗಲೂ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದೇನೆ, ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ಎಲ್ಲಾ ಸಮುದಾಯದ ಜನರ ಬೆಂಬಲ ನನಗಿದೆ. ಒಂದು ವೇಳೆ ಅಲ್ಪಸಂಖ್ಯಾತರು ನನಗೆ ಮತ ಹಾಕದೇ ಇದ್ದರೂ ನಾನು ಚುನಾವಣೆಯಲ್ಲಿ ಸೋಲುವುದಿಲ್ಲ ಅಂತಾ ಭವಿಷ್ಯ ನುಡಿದಿದ್ದಾರೆ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರುತ್ತಿದ್ದೇನೆ, ಟಿಕೆಟ್ ಕೊಡುವುದು ಬಿಡುವುದು ಹಿರಿಯ ಮುಖಂಡರಿಗೆ ಬಿಟ್ಟ ವಿಚಾರ ಅಂತಾ ಹೇಳಿದ್ದಾರೆ.

ಆದ್ರೆ ಕಾಂಗ್ರೆಸ್ ಮಾತ್ರ ಗೋಧ್ರಾದಲ್ಲಿ ಗೆಲುವು ಶತಸಿದ್ಧ ಅಂತಾ ಹೇಳಿಕೊಂಡಿದೆ. ಕಾಂಗ್ರೆಸ್ ನಿಂದ ಉಚ್ಛಾಟನೆಗೊಂಡ ಶಾಸಕರೆಲ್ಲ ಮುಂದಿನ ಚುನಾವಣೆಯಲ್ಲಿ ಸೋಲು ಅನುಭವಿಸುತ್ತಾರೆ ಅಂತಾ ಅಭಿಪ್ರಾಯಪಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...