alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಡೊಮ್ ಬಳಕೆದಾರರಿಗೊಂದು ಸುದ್ದಿ

condom

ನವದೆಹಲಿ: ಸುರಕ್ಷಿತ ಲೈಂಗಿಕತೆಗಾಗಿ ಕಾಂಡೊಮ್ ಬಳಸುವುದು ಸಾಮಾನ್ಯ. ಆರೋಗ್ಯ ಇಲಾಖೆಯಿಂದ ಜನನಿಬಿಡ ಸ್ಥಳಗಳಲ್ಲಿ ಪೆಟ್ಟಿಗೆಯಲ್ಲಿ ಕಾಂಡೊಮ್ ಗಳನ್ನು ಇಡಲಾಗುತ್ತದೆ. ಈಗಂತೂ ಹಲವು ಕಂಪನಿಗಳ ಕಾಂಡೊಮ್ ಬಂದಿವೆ.

ಕಾಂಡೊಮ್ ಪ್ಯಾಕೆಟ್ ಗಳ ಮೇಲೆ ಹಸಿಬಿಸಿ ದೃಶ್ಯಗಳು, ಸುರಕ್ಷಿತ ಲೈಂಗಿಕತೆಗೆ ಕಾಂಡೊಮ್ ಬಳಸಿ ಮೊದಲಾದ ಸಂದೇಶಗಳನ್ನು ಕಾಣಬಹುದಾಗಿದೆ. ಹೀಗೆ ಅಶ್ಲೀಲ ಜಾಹೀರಾತು ನಿಯಂತ್ರಿಸುವ ಕುರಿತಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರು, ಹೆಚ್ಚುವರಿ ಸಾಲಿಸಿಟರ್ ಜನರಲ್ ಮಹೇಂದರ್ ಸಿಂಗ್ ಅವರಿಗೆ ಸೂಚನೆ ನೀಡಿದ್ದರು. ಅದರಂತೆ ಜಾಹೀರಾತಿನ ಬಗ್ಗೆ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಲು ತೀರ್ಮಾನಿಸಲಾಗಿದೆ.

ತಂಬಾಕು ಹಾಗೂ ಮದ್ಯ ಉತ್ಪನ್ನಗಳ ಜಾಹೀರಾತಿಗೆ ನಿಯಂತ್ರಣ ಹೇರಬಹುದು. ಆದರೆ, ಕಾಂಡೊಮ್, ಗರ್ಭನಿರೋಧಕಗಳ ಜಾಹೀರಾತು ನಿಯಂತ್ರಿಸುವ ಯೋಚನೆ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಕಾಂಡೊಮ್ ಪ್ಯಾಕೆಟ್ ಮೇಲೆ ಖಾಸಗಿ ಕಂಪನಿಗಳು ಅಶ್ಲೀಲ ದೃಶ್ಯ ಪ್ರಕಟಿಸುವುದನ್ನು ಸೆನ್ಸಾರ್ ಮಂಡಳಿ, ಸರ್ಕಾರ, ಬೇರಾವುದೇ ಸಂಸ್ಥೆ ನಿಯಂತ್ರಿಸುವುದಿಲ್ಲ. ಇಂತಹ ಜಾಹೀರಾತು ನಿಯಂತ್ರಿಸುವ ಯೋಚನೆ ಇಲ್ಲ ಎಂದು ಅಫಿಡವಿಟ್ ಸಲ್ಲಿಸಲಾಗುವುದೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...