alex Certify
ಕನ್ನಡ ದುನಿಯಾ       Mobile App
       

Kannada Duniya

ಈ ‘ವಂಡರ್ ಬಾಯ್’ ವಿಡಿಯೋ ನೋಡಿದ್ರೆ ಬೆರಗಾಗ್ತೀರಿ

Ravik-Kumar 34

ಇವನ ಸಾಧನೆ ಖಂಡಿತ ಸ್ಪೂರ್ತಿಯಾಗಬಲ್ಲದು. ಶಾಲೆಯ ಮೆಟ್ಟಿಲನ್ನೂ ಹತ್ತದ, ಯಾವ ತರಬೇತಿಯನ್ನೂ ಪಡೆದುಕೊಳ್ಳದ ಇವನ ಭಾಷಾ ಪ್ರೌಢಿಮೆಗೆ ನೀವು ಮನ ಸೋಲದೆ ಇರಲಾರಿರಿ.

ಅಂದ ಹಾಗೇ ಇವನ ಹೆಸರು ರವಿಕುಮಾರ್. ಗುಜರಾತ್ ಮೂಲದ ಇವನ ಪೋಷಕರು ಮುಂಬೈನಲ್ಲಿ ನೆಲೆಸಿದ್ದಾರೆ. ಮುಂಬೈನಲ್ಲಿ ಜನಿಸಿದ ರವಿಕುಮಾರ್ ಅಜ್ಜಿಯ ಜೊತೆಗೆ ಇದ್ದಾನೆ. ಮುಂಬೈನ ಹ್ಯಾಂಗಿಂಗ್ ಗಾರ್ಡನ್ ಸುತ್ತಮುತ್ತ ನವಿಲುಗರಿ ಬೀಸಣಿಕೆ ಮಾರಾಟ ಮಾಡುತ್ತಾನೆ. ಈ ರವಿಕುಮಾರ್ ಬಹು ಭಾಷಾ ಪ್ರವೀಣ.

ಶಾಲೆಯ ಮೆಟ್ಟಿಲನ್ನು ಹತ್ತದ, ಇದಕ್ಕಾಗಿ ಯಾವುದೇ ತರಬೇತಿಯನ್ನು ಪಡೆದುಕೊಳ್ಳದ ರವಿಕುಮಾರ್ ಬರೋಬ್ಬರಿ ಹತ್ತು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾನೆ. ಬೀಸಣಿಕೆ ಮಾರಾಟ ಮಾಡುತ್ತಲೇ ಹತ್ತು ಭಾಷೆ ಕಲಿತಿದ್ದಾನೆ. ಹೊರ ರಾಜ್ಯದ ಹಾಗೂ ವಿದೇಶಗಳ ಜನರೊಂದಿಗೆ ಮಾತನಾಡುತ್ತಾ ಇಷ್ಟೊಂದು ಭಾಷೆ ಕಲಿಯಲು ಆತನಿಗೆ ಸಾಧ್ಯವಾಗಿದೆ ಎಂಬುದು ಅಚ್ಚರಿಯ ವಿಷಯ.

ಈತನ ಭಾಷಾ ಪ್ರೌಢಿಮೆಯನ್ನು ವಿದೇಶಿ ಯುವತಿಯೊಬ್ಬಳು ಚಿತ್ರೀಕರಿಸಿ ವೀಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದಳು. ಇದು ಬಹಳ ಹಿಂದೆ ನಡೆದಿತ್ತು. ಅಪಾರ ಸಂಖ್ಯೆಯ ಜನ ಇದನ್ನು ವೀಕ್ಷಿಸಿದ್ದರು. ಇದರಿಂದಾಗಿ ರವಿಕುಮಾರ್ ಸೆಲೆಬ್ರಿಟಿಯಂತಾಗಿದ್ದು ಅವನನ್ನು ನೋಡಿ, ಪೋಟೊ ತೆಗೆಸಿಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿದೆ. ಕೆಲ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆಗೆ ರವಿಯನ್ನು ಕರೆಸಿಕೊಂಡು ವಿದ್ಯಾರ್ಥಿಗಳ ಮುಂದೆ ಆತನ ಸಾಧನೆಯನ್ನು ವಿವರಿಸಿ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದ್ದಾರೆ.. ಅಂದ ಹಾಗೇ ಇದು ಹಳೆಯ ವಿಡಿಯೋವಾದರೂ ಇತರರಿಗೂ ಸ್ಪೂರ್ತಿಯಾಗಲಿ ಎಂದು ಹಾಕಲಾಗಿದೆ.

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...