alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷೆ ಬರೆಯಲು ಬಂದ ಯುವತಿಯ ಸ್ಲೀವ್ಸ್ ಕತ್ತರಿಸಿದ ಸಿಬ್ಬಂದಿ

ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬಂದ ಯುವತಿಯ ಡ್ರೆಸ್ ನ ತೋಳುಗಳನ್ನು ಕತ್ತರಿಸಿದ ಘಟನೆ ಬಿಹಾರದ ಮುಜಾಫರ್ ಪುರ ಜಿಲ್ಲೆಯಲ್ಲಿ ನಡೆದಿದೆ. ಸಾರ್ವಜನಿಕರ ಎದುರಲ್ಲೇ ಆಕೆಯ ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಆಕೆಯ ಬಟ್ಟೆಯ ಸ್ಲೀವ್ಸ್ ಕತ್ತರಿಸಿದ್ದಾರೆ.

ಈ ಘಟನೆಯ ದೃಶ್ಯ ಸ್ಥಳೀಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಯುವತಿಯ ಪೋಷಕರೊಂದಿಗೆ, ಸ್ಥಳೀಯರು ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಹಾರ ಕಂಬೈನ್ಡ್ ಎಂಟ್ರನ್ಸ್ ಕಾಂಪಿಟಿಟಿವ್ ಎಕ್ಸಾಮಿನೇಷನ್ ಬೋರ್ಡ್ ನರ್ಸಿಂಗ್ ಪರೀಕ್ಷೆ ಆಯೋಜಿಸಿತ್ತು. ಈ ಪರೀಕ್ಷೆಗೆ ಪೂರ್ಣ ತೋಳಿನ ಉಡುಪು ಧರಿಸದಂತೆ ತಿಳಿಸಲಾಗಿತ್ತು. ಆದ್ರೂ ಈ ಯುವತಿ ಫುಲ್ ಸ್ಲೀವ್ಸ್ ಬಟ್ಟೆ ಹಾಕಿಕೊಂಡು ಬಂದಿದ್ದಳು. ಹೀಗಾಗಿ ಬಟ್ಟೆಯ ತೋಳುಗಳನ್ನು ಕತ್ತರಿಸಲಾಯ್ತು ಎಂದು ಜಿಲ್ಲಾ ಶಿಕ್ಷಣ ಅಧಿಕಾರಿ ಲಾಲನ್ ಪ್ರಸಾದ್ ಸಿಂಗ್ ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರದ ಸಿಬ್ಬಂದಿ, ಆ ಯುವತಿಯ ಸ್ಲೀವ್ಸ್ ಗಳನ್ನು ಕತ್ತರಿ ಮತ್ತು ಬ್ಲೇಡ್ ಗಳಿಂದ ಕತ್ತರಿಸುತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಲು ಶಿಕ್ಷಣ ಇಲಾಖೆ ಸೂಚಿಸಿದೆ. ಹಾಗಂತ ಈ ಘಟನೆ ಪ್ರಶ್ನಾರ್ಹವಲ್ಲ. ಆದ್ರೆ ಆ ಯುವತಿ ಬಟ್ಟೆಯ ತೋಳನ್ನು ಸಾರ್ವಜನಿಕವಾಗಿ ಕತ್ತರಿಸಿದ್ದು ತಪ್ಪು ಎಂದು ಹೇಳಲಾಗಿದೆ.

ಈ ಘಟನೆ ನಡೆದ ಶಾಲೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದ್ದು, ಭವಿಷ್ಯದಲ್ಲಿ ಎಂದಿಗೂ ಈ ಶಾಲೆಯಲ್ಲಿ ಪರೀಕ್ಷೆ ನಡೆಸದಂತೆ ಶಿಕ್ಷಣ ಇಲಾಖೆ ತಿಳಿಸಿದೆ. ಅಲ್ಲದೆ ಪರೀಕ್ಷೆಗೆ ಅಧೀಕ್ಷಕರಾಗಿ ಸೇವೆ ಸಲ್ಲಿಸಿದ ಅಧಿಕಾರಿಯನ್ನೂ ಸಹ ಡಿಬಾರ್ ಮಾಡಲಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...