alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಗೆ ರವಾನೆಯಾಗಲಿದೆ 1000 ಸ್ಯಾನಿಟರಿ ಪ್ಯಾಡ್

ಮಹಿಳೆಯರ ಅವಶ್ಯಕತೆಗಳಲ್ಲಿ ಒಂದಾಗಿರುವ ಸ್ಯಾನಿಟರಿ ಪ್ಯಾಡ್ ಕೂಡ ಜಿ ಎಸ್ ಟಿ ಕಪಿ ಮುಷ್ಠಿಯಲ್ಲಿದೆ. ಇದ್ರಿಂದಾಗಿ ಸ್ಯಾನಿಟರಿ ನ್ಯಾಪ್ಕಿನ್ ಗಳ ಬೆಲೆ ಏರಿದೆ. ನ್ಯಾಪ್ಕಿನ್ ಗಳನ್ನು ತೆರಿಗೆ ಮುಕ್ತಗೊಳಿಸಬೇಕೆಂಬ ಕೂಗು ಅನೇಕ ದಿನಗಳಿಂದ ನಡೆಯುತ್ತಿದೆ. ಮಧ್ಯಪ್ರದೇಶದ ಮಹಿಳೆಯರು ಭಿನ್ನ ರೀತಿಯಲ್ಲಿ ಪ್ರತಿಭಟಿಸಲು ಮುಂದಾಗಿದ್ದಾರೆ.

ಗ್ವಾಲಿಯರ್ ನಲ್ಲಿ ಮಹಿಳೆಯರ ಹಸ್ತಾಕ್ಷರವಿರುವ 1 ಸಾವಿರ ಸ್ಯಾನಿಟರಿ ನ್ಯಾಪ್ಕಿನ್ ನನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಕಳುಹಿಸಲು ಮಹಿಳೆಯರು ಮುಂದಾಗಿದ್ದಾರೆ. ಸುಮಾರು 40 ವರ್ಷದವರೆಗೆ ಮಹಿಳೆ ಪ್ರತಿ ತಿಂಗಳು ನಾಲ್ಕೈದು ದಿನ ಇದನ್ನು ಬಳಸ್ತಾಳೆ. ಒಂದು ಕಡೆ ಸ್ವಚ್ಛ ಭಾರತದ ಹೆಸರು ಹೇಳುತ್ತಿರುವ ಮೋದಿ ಮಹಿಳೆಯರ ಸ್ವಚ್ಛತೆಗೆ ಗಮನ ನೀಡುತ್ತಿಲ್ಲ ಎಂಬುದು ಪ್ರತಿಭಟನಾಕಾರರ ದೂರಾಗಿದೆ.

ಸ್ಯಾನಿಟರಿ ಪ್ಯಾಡ್ ಗೆ ಶೇಕಡಾ 12ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದ್ರಿಂದ ಪ್ಯಾಡ್ ಬೆಲೆ ದುಬಾರಿಯಾಗಿದ್ದು, ಬಡ ಸ್ತ್ರೀಗೆ ಇದನ್ನು ಖರೀದಿ ಮಾಡುವುದು ಕಷ್ಟವಾಗ್ತಿದೆ. ಸ್ಯಾನಿಟರಿ ಪ್ಯಾಡ್ ಮೇಲೆ ವಿಧಿಸಿರುವ ತೆರಿಗೆಯನ್ನು ಮುಕ್ತಗೊಳಿಸಬೇಕೆಂಬುದು ನಮ್ಮ ಒತ್ತಾಯ ಎಂದು ಮಹಿಳೆಯರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...