alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಮೇಲೆ ಹತ್ಯೆ ಆರೋಪ ಹೊರಿಸಿ ಇನ್ನೊಬ್ಬನ ಜೊತೆಗಿದ್ದಳು ಪತ್ನಿ…!

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪತ್ನಿ ಹತ್ಯೆ ಆರೋಪದ ಮೇಲೆ ಪತಿಯೊಬ್ಬನನ್ನು ಬಂಧಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಆಶ್ಚರ್ಯಕಾರಿ ಸಂಗತಿ ತಿಳಿದಿದೆ. ಮೃತಪಟ್ಟಿದ್ದಾಳೆಂದುಕೊಂಡಿದ್ದ ಮಹಿಳೆ ಬೇರೆ ವ್ಯಕ್ತಿ ಜೊತೆ ದೆಹಲಿಯಲ್ಲಿ ಸಂಸಾರ ಮಾಡ್ತಿದ್ದಳು.

2016 ರಲ್ಲಿ ರಾಹುಲ್ ಹಾಗೂ ರೂಬಿ ಮದುವೆ ನಡೆದಿತ್ತಂತೆ. 2018, ಜೂನ್ ತಿಂಗಳಿನಲ್ಲಿ ರೂಬಿ ಪಾಲಕರು, ಮಗಳ ಹತ್ಯೆ ಆರೋಪವನ್ನು ಅಳಿಯ ರಾಹುಲ್ ಮೇಲೆ ಹಾಕಿದ್ದರು. ರೂಬಿ ಮೃತದೇಹ ಸಿಗದ ಕಾರಣ ಪೊಲೀಸರು ಕೇಸ್ ಖುಲಾಸೆ ಮಾಡಿದ್ದರು. ಆದ್ರೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ಮತ್ತೊಮ್ಮೆ ತನಿಖೆಗೆ ಆದೇಶ ನೀಡಿತ್ತು.

ತನಿಖೆ ನಡೆಸಿದ ಪೊಲೀಸರಿಗೆ ರೂಬಿ ಫೇಸ್ಬುಕ್ ಹಾಗೂ ಫೋನ್ ಆ್ಯಕ್ಟಿವ್ ಆಗಿರುವುದು ಗೊತ್ತಾಗಿದೆ. ತಕ್ಷಣ ಪೊಲೀಸರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ರಾಮು ಎಂಬಾತನ ಜೊತೆಗಿದ್ದ ರೂಬಿಯನ್ನು ಬಂಧಿಸಿದ್ದಾರೆ. ರಾಮು ಜೊತೆ ಸಂಸಾರ ಮಾಡಲು ರೂಬಿ ಪತಿ ರಾಕೇಶ್ ವಿರುದ್ಧ ಹತ್ಯೆ ಆರೋಪ ಹೊರಿಸಿದ್ದಳಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...