alex Certify
ಕನ್ನಡ ದುನಿಯಾ       Mobile App
       

Kannada Duniya

ತಾಳಿ ತೆಗೆಸಿಟ್ಟಿದ್ದಕ್ಕೆ ಪ್ರತಿಭಟನೆ ನಡೆಸಿದ ಪತಿಯಂದಿರು

ತೆಲಂಗಾಣ ಸರಕಾರ ವಿವಿಧ ಹುದ್ದೆಗಳ ನೇಮಕಕ್ಕೆ ನಡೆಸಿದ ಪರೀಕ್ಷೆಗೆ ಹಾಜರಾಗಲು ಆಗಮಿಸಿದ್ದ ವಿವಾಹಿತ ಮಹಿಳೆಯರಿಗೆ ತಾಳಿ ಬಿಚ್ಚಿಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದರಿಂದ, ಗಂಡಂದಿರು ಕೆಲ ಪರೀಕ್ಷಾ ಕೇಂದ್ರದ ಮುಂಭಾಗ ಪ್ರತಿಭಟನೆ ನಡೆಸಿರುವ ಘಟನೆ ಭಾನುವಾರ ನಡೆದಿದೆ.

ತೆಲಂಗಾಣ ರಾಜ್ಯ ಪೊಲೀಸ್ ಸೇವಾ ಆಯೋಗ ಹಾಗೂ ಗ್ರಾಮ ಕಂದಾಯ ಅಧಿಕಾರಿ ಸೇರಿದಂತೆ 700 ಹುದ್ದೆಗೆ ರಾಜ್ಯದ ಎರಡು ಸಾವಿರಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 10 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.

ಮೇದಕ್ ಜಿಲ್ಲೆಯ ನರಸಾಪುರದ ಲಿಟಲ್ ಫ್ಲವರ್ ಶಾಲೆಯಲ್ಲಿ ಮಾತ್ರ ಅಧಿಕಾರಿಗಳು ಮಹಿಳೆಯರಿಗೆ ಮಂಗಳಸೂತ್ರವನ್ನು ತಗೆದು ಪರೀಕ್ಷೆಗೆ ಹಾಜರಾಗಲು ಸೂಚನೆ ನೀಡಿದ್ದರು. ಅನಿವಾರ್ಯವಾಗಿ ಕೆಲ ಮಹಿಳೆಯರು ತಾಳಿ ತಗೆದಿಟ್ಟು ಪರೀಕ್ಷೆಗೆ ಹಾಜರಾದರೆ, ಅದೇ ತಾಳಿಯನ್ನಿಟ್ಟುಕೊಂಡು ಪತಿಯಂದಿರುವ ಪ್ರತಿಭಟನೆ ನಡೆಸಿದ್ದಾರೆ.

ತಾಳಿ ತೆಗೆಯುವುದು ಹಿಂದೂ ಸಂಪ್ರದಾಯದಲ್ಲಿ ಕೆಟ್ಟದ್ದೆಂದು ಮಹಿಳೆಯರು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರೂ, ಅಧಿಕಾರಿಗಳು ಒಪ್ಪಿಲ್ಲ. ನನ್ನ ಪತ್ನಿಯೂ ಪರಿಪರಿಯಾಗಿ ಮನವಿ ಮಾಡಿಕೊಂಡರು ಅದಕ್ಕೆ ಅಧಿಕಾರಿಗಳು ಒಪ್ಪದೇ ತಾಳಿಯನ್ನು ತೆಗೆಸಿದ್ದಾರೆ ಎಂದು ವಿಕ್ರಬಾದ್ ನಿಂದ ಆಗಮಿಸಿದ್ದ ಶಿವಕುಮಾರ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಆದರೆ ಈ ಬಗ್ಗೆ ವಿವಾದ ಸೃಷ್ಟಿಯಾಗುತ್ತಿದ್ದಂತೆ, ಅಧಿಕಾರಿಗಳು ನಕಲು ತಪ್ಪಿಸುವ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಕೆಲವರು ತಾಳಿಯಲ್ಲಿ ಡಿಜಿಟಲ್ ಚಿಪ್‌ಗಳನ್ನು ಅಳವಡಿಸಿಕೊಂಡು ಪರೀಕ್ಷೆಯಲ್ಲಿ ನಕಲು ಮಾಡುತ್ತಾರೆ. ಇದನ್ನು ತಡೆಯಲು ಇದು ಅನಿವಾರ್ಯ ಎಂದಿದ್ದಾರೆ. ಪ್ರತಿಭಟನೆಯಿಂದ ಪರೀಕ್ಷಾ ಕೇಂದ್ರಕ್ಕೆ ತೊಂದರೆಯಾಗದಿರಲಿ ಎಂದು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...