alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯದ ಅಮಲಿನಲ್ಲಿ ಯುವತಿಯನ್ನು ಕೆಣಕಿ ಚಪ್ಪಲಿ ಏಟು ತಿಂದ ಪೇದೆ

ಪಾನಮತ್ತನಾಗಿದ್ದ ಪೊಲೀಸ್ ಪೇದೆಯೊಬ್ಬ ಮದ್ಯದ ಅಮಲಿನಲ್ಲಿ ಯುವತಿಯೊಬ್ಬಳನ್ನು ಕೆಣಕಿ ಸಾರ್ವಜನಿಕರ ಸಮ್ಮುಖದಲ್ಲೇ ಚಪ್ಪಲಿ ಏಟು ತಿಂದಿದ್ದಾನೆ. ಹರಿಯಾಣದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಹಿಸ್ಸಾರ್ ಜಿಲ್ಲೆಯ ಸೆಕ್ಟರ್ 4 ರಲ್ಲಿ ಫೆಬ್ರವರಿ 2 ರಂದು ಈ ಘಟನೆ ನಡೆದಿದ್ದು, ಸಮವಸ್ತ್ರ ಧರಿಸಿ ಕರ್ತವ್ಯದಲ್ಲಿರುವಾಗಲೇ ತನ್ನ ಸ್ನೇಹಿತನೊಂದಿಗೆ ಕಂಠಪೂರ್ತಿ ಮದ್ಯ  ಸೇವಿಸಿದ್ದ ಈ ಪೇದೆ ಅಲ್ಲಿಯೇ ಹೋಗುತ್ತಿದ್ದ ಯುವತಿಯನ್ನು ಕೆಣಕಿದ್ದಾನೆ.

ಆಕೆ ತಿರುಗಿ ಬಿದ್ದಿದ್ದು, ಸುತ್ತಮುತ್ತಲಿದ್ದ ಸಾರ್ವಜನಿಕರೂ ಗುಂಪುಗೂಡಿದ್ದಾರೆ. ಬಳಿಕ ಪೊಲೀಸ್ ಪೇದೆಗೆ ಯುವತಿ ಚಪ್ಪಲಿಯಿಂದ ಹೊಡೆದಿದ್ದು, ಆತನ ವರ್ತನೆಗೆ ಸಾರ್ವಜನಿಕರೂ ಛೀಮಾರಿ ಹಾಕಿದ್ದಾರೆ. ಕೆಲವರು ಇದೆಲ್ಲ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಪೇದೆ ಮದ್ಯ ಸೇವಿಸಿದ್ದು ಹೌದಾದರೂ ಅನುಚಿತ ವರ್ತನೆ ತೋರಿಲ್ಲವೆಂದು ಪೊಲೀಸರು ಹೇಳುತ್ತಿದ್ದು, ತನಿಖೆಯ ಬಳಿಕವಷ್ಟೇ ಸತ್ಯಾಂಶ ಹೊರ ಬರಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...