alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಕ್ ಪಾರ್ಟಿ, ಸೆಲ್ಫಿ ನಂತ್ರ ಸ್ನೇಹಿತೆಯರಿಟ್ರು ಇಂಥ ಹೆಜ್ಜೆ..!

ಅವರಿಬ್ಬರು ಒಳ್ಳೆ ಸ್ನೇಹಿತೆಯರು. ಇಬ್ಬರು ಒಟ್ಟಿಗೆ ವಾಸವಾಗಿದ್ರು ಕೂಡ. ಆದ್ರೆ ವೈಯಕ್ತಿಕ ಜೀವನದ ಬಗ್ಗೆ ಇಬ್ಬರಿಗೂ ಬೇಸರವಿತ್ತು. ಹಾಗಾಗಿ ಜೀವನ ಮುಗಿಸಲು ಇಬ್ಬರು ಸೇರಿ ಪ್ಲಾನ್ ಮಾಡಿದ್ರು. ಒಟ್ಟಿಗೆ ಟೀ ಮಾಡಿ ಸಕ್ಕರೆ ಬದಲು ವಿಷ ಬೆರೆಸಿದ್ರು. ವಿಷಪೂರಿತ ಟೀ ಜೊತೆ ಸೆಲ್ಫಿ ತೆಗೆದ್ರು. ಇದಕ್ಕೂ ಮುನ್ನ ಕೇಕ್ ಕತ್ತರಿಸಿದ್ದ ಸ್ನೇಹಿತೆಯರು ಖುಷಿ ಖುಷಿಯಾಗಿ ಜೀವ ಬಿಟ್ರು.

ಘಟನೆ ನಡೆದಿರುವುದು ಮಧ್ಯಪ್ರದೇಶದ ಇಂದೋರ್ ನಲ್ಲಿ. ವಿಜಯನಗರದ ಮನೆಯೊಂದರಲ್ಲಿ ಸ್ನೇಹಿತೆಯರಿಬ್ಬರು ವಾಸವಾಗಿದ್ದರು. ರಚನಾ ಹಾಗೂ ತಾನ್ವಿ ಆತ್ಮಹತ್ಯೆ ಮಾಡಿಕೊಂಡ ಸ್ನೇಹಿತೆಯರು.ರಚನಾಗೆ ಮದುವೆಯಾಗಿದ್ದು, ಒಬ್ಬ ಮಗನಿದ್ದಾನೆ. ಆದ್ರೆ ಪತಿಯ ವರ್ತನೆಯಿಂದ ಬೇಸತ್ತಿದ್ದಳು. ತಾನ್ವಿ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಆಗಸ್ಟ್ 27ರಂದು ಅಥವಾ 28ರಂದು ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಅಂದಾಜಿಸಲಾಗಿದೆ. ಸ್ನೇಹಿತೆಯರು ಫೋನ್ ತೆಗೆದುಕೊಳ್ಳದ ಕಾರಣ ಅನುಮಾನಗೊಂಡ ಕಚೇರಿ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಗೆ ಬಂದಾಗ ಇಬ್ಬರ ಶವ ಸಿಕ್ಕಿದೆ. ಗಂಡನನ್ನು ದ್ವೇಷ ಮಾಡ್ತೇನೆ. ಆದ್ರೆ ನನ್ನ ಆತ್ಮಹತ್ಯೆಗೆ ನಾನು ಕಾರಣ. ಮಗನನ್ನು ತಂದೆ-ತಾಯಿಗೆ ನೀಡಿ ಎಂದು ಸೂಸೈಡ್ ನೋಟ್ ಬರೆದಿದ್ದಾಳೆ ರಚನಾ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...