alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆ 2ನೇ ಮದುವೆ ತಪ್ಪಿಸಲು ಮಗು ಕದ್ದ ಯುವತಿಯರು

ರಾಜಸ್ತಾನದ ಭರತಪುರ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಅಪಹರಿಸಿದ್ದ ಇಬ್ಬರು ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ. ತಂದೆಯ ಎರಡನೇ ಮದುವೆ ತಪ್ಪಿಸಲು ಯುವತಿಯರು ಹೀಗೆ ಮಾಡಿದ್ದರು ಎನ್ನಲಾಗಿದೆ. ಗಂಡು ಮಗುವಿನ ಆಸೆಯಲ್ಲಿ ತಂದೆ ಇನ್ನೊಂದು ಮದುವೆಗೆ ಮುಂದಾಗಿದ್ದ.

ಯುವತಿಯರ ತಾಯಿ ಎಷ್ಟೇ ಪ್ರಯತ್ನಿಸಿದ್ರೂ ಮತ್ತೆ ಗರ್ಭ ಧರಿಸಿರಲಿಲ್ಲ. ಇದೇ ನೋವಿನಿಂದ ಆತ್ಮಹತ್ಯೆಗೂ ಯತ್ನಿಸಿದ್ದಳು. ಯುವತಿಯರ ತಂದೆಗೆ ಇನ್ನೊಂದು ಮದುವೆ ಆಗುವಂತೆ ಸಂಬಂಧಿಕರು ಸಲಹೆ ನೀಡಿದ್ದರು ಎನ್ನಲಾಗಿದೆ. ಇದನ್ನು ಸಹಿಸದ ಯುವತಿಯರು ತಾಯಿ ಗರ್ಭವತಿ ಎಂದು ಸುಳ್ಳು ಹೇಳಿದ್ದಾರೆ.

ನಂತ್ರ ಆಸ್ಪತ್ರೆಯೊಂದರ ನರ್ಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಮಗು ಖರೀದಿಗೆ ಮುಂದಾಗಿದ್ದಾರೆ. ಆದ್ರೆ ಮಗು ಜನಿಸುವ ಮೊದಲೇ ಸಾವನ್ನಪ್ಪಿದ್ದರಿಂದ ಕೆಲಸ ಪೂರ್ಣವಾಗಲಿಲ್ಲ. ಕೊನೆಯದಾಗಿ ಇವರು ಮಗುವನ್ನು ಕಳ್ಳತನ ಮಾಡಲು ಮುಂದಾಗಿದ್ದಾರೆ. ಆದ್ರೆ ಮಗು ಕದಿಯುವ ವೇಳೆ ಇವ್ರ ಮುಖ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೇ ಭಯಕ್ಕೆ ಮಗುವನ್ನು ರಸ್ತೆ ಬದಿ ಬಿಟ್ಟು ಹೋಗಿದ್ದಾರೆ. ತನಿಖೆ ಶುರುಮಾಡಿ ವಿಚಾರಣೆ ನಡೆಸಿದಾಗ ಯುವತಿಯರು ಸತ್ಯ ಬಾಯ್ಬಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...