alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರು ಆರೋಗ್ಯ ವೃದ್ಧಿಗೆ ರುಬ್ಬುಕಲ್ಲು ಬಳಸಿ ಎಂದ ಶಿಕ್ಷಣ ಇಲಾಖೆ

ರಾಜಸ್ತಾನ ಶಿಕ್ಷಣ ಇಲಾಖೆ ಮಹಿಳೆಯರ ಆರೋಗ್ಯ ವೃದ್ಧಿಗೆ ಸಲಹೆಯೊಂದನ್ನು ನೀಡಿದೆ. ಈ ಸಲಹೆ ಇದೀಗ ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜಸ್ತಾನ ಶಿಕ್ಷಣ ಇಲಾಖೆ  ಮಾಸಿಕ ಪತ್ರಿಕೆ ಶಿವಿರಾದಲ್ಲಿ ಮಹಿಳೆಯರು ಹಾಗೂ ಪುರುಷರ ಆರೋಗ್ಯ ವೃದ್ಧಿಗೆ ಕೆಲ ಸಲಹೆ ನೀಡಲಾಗಿದೆ. ಮಹಿಳೆಯರು ಆರೋಗ್ಯ ಕಾಪಾಡಿಕೊಳ್ಳಬೇಕಾದಲ್ಲಿ ರುಬ್ಬು ಕಲ್ಲು ಬಳಸಬೇಕೆಂದು ಇಲಾಖೆ ಹೇಳಿದೆ. ಅಕ್ಕಿಯನ್ನು ರುಬ್ಬು ಕಲ್ಲಿನಲ್ಲಿ ರುಬ್ಬಿದ್ರೆ, ಕಸ ಗುಡಿಸಿದ್ರೆ, ಕೊಡಗಳಿಗೆ ನೀರು ತುಂಬಿಸಿದ್ರೆ ಮಹಿಳೆಯರು ಆರೋಗ್ಯವಾಗಿರುತ್ತಾರೆಂದು ಇಲಾಖೆ ಹೇಳಿದೆ.

ಪತ್ರಿಕೆಯಲ್ಲಿ ಆರೋಗ್ಯ ವೃದ್ಧಿಗೆ 14 ಸಲಹೆಗಳನ್ನು ನೀಡಲಾಗಿದೆ. ಇದ್ರಲ್ಲಿ ಬೆಳಿಗ್ಗೆ ಬೇಗ ಏಳುವುದ್ರಿಂದ ಹಿಡಿದು ವಾಕಿಂಗ್, ಜಾಗಿಂಗ್ ಎಲ್ಲವೂ ಸೇರಿದೆ. ಸೈಕಲ್ ಓಡಿಸಬೇಕು, ವ್ಯಾಯಾಮ ಮಾಡಬೇಕೆಂದು ಸಲಹೆ ನೀಡಲಾಗಿದೆ. ರುಬ್ಬು ಕಲ್ಲಿನಲ್ಲಿ ಆಹಾರ ರುಬ್ಬಿದ್ರೆ, ಹಗ್ಗದಾಟ ಆಡಿದ್ರೆ, ನೀರು ಹಾಕಿದ್ರೆ, ಕಸ ಗುಡಿಸಿದ್ರೆ ಮಹಿಳೆಯರಿಗೆ ವ್ಯಾಯಾಮವಾಗುತ್ತದೆ ಎಂದು ಬರೆಯಲಾಗಿದೆ.

ಪತ್ರಿಕೆ ಈ ವರದಿಗೆ ತೀವ್ರ ವಿರೋಧ ವ್ಯಕ್ತವಾಗ್ತಿದೆ. ಮಹಿಳೆಯರು ಮಾತ್ರ ಏಕೆ ಈ ಕೆಲಸ ಮಾಡಬೇಕೆಂದು ಸಲಹೆ ನೀಡಲಾಗಿದೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಹಾಗೆ ಅಭಿವೃದ್ಧಿ ಬಗ್ಗೆ ಪಾಠ ಹೇಳಬೇಕಿದ್ದ ಶಿಕ್ಷಣ ಇಲಾಖೆಯೇ ಈ ರೀತಿಯ ಸಲಹೆ ನೀಡಿದ್ರೆ ಹೇಗೆ ಎಂದು ಅನೇಕರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ರೆ ಶಿಕ್ಷಣ ಇಲಾಖೆ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದೆ. ಬರಹಗಾರ ಸುತ್ತಮುತ್ತಲಿನ ಪರಿಸರಕ್ಕೆ ಪ್ರಭಾವಿತನಾಗಿದ್ದಾನೆಯೇ ಹೊರತು ಮಹಿಳೆ ಎನ್ನುವ ತಾರತಮ್ಯದಿಂದ ಈ ಲೇಖನ ಬರೆದಿಲ್ಲ ಎಂದಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...