alex Certify
ಕನ್ನಡ ದುನಿಯಾ       Mobile App
       

Kannada Duniya

‘ಮಹಿಳೆಗಿದೆ ಗರ್ಭಪಾತ ಮಾಡಿಸಿಕೊಳ್ಳುವ ಸಂಪೂರ್ಣ ಹಕ್ಕು’

http-%2F%2Fo.aolcdn.com%2Fhss%2Fstorage%2Fmidas%2F4c60637777b1316efd37509a72aec40a%2F204353872%2FRTR3J91L

ಗರ್ಭಿಣಿಯರ ವಿಚಾರಕ್ಕೆ ಸಂಬಂಧಿಸಿದಂತೆ ಮುಂಬೈ ಹೈಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ. ಸ್ವತಂತ್ರವಾಗಿ ಜೀವನ ನಡೆಸುವ ಅಧಿಕಾರವನ್ನು ಸಮರ್ಥನೆ ಮಾಡುತ್ತ ಯಾವುದೇ ಕಾರಣವಿರಲಿ, ಗರ್ಭಪಾತ ಮಾಡಿಸಿಕೊಳ್ಳುವ ಸಂಪೂರ್ಣ ಹಕ್ಕು ಮಹಿಳೆಗಿದೆ ಎಂದಿದೆ.

ವಿವಾಹಿತ ಮಹಿಳೆಗೆ ಮಾತ್ರ ಈ ಅಧಿಕಾರವಿಲ್ಲ. ಬದಲಾಗಿ ಲಿವ್ ಇನ್ ರಿಲೇಶನ್ ನಲ್ಲಿರುವ ಮಹಿಳೆ ಕೂಡ ಗರ್ಭಪಾತ ಮಾಡಿಸಿಕೊಳ್ಳುವ ಸಂಪೂರ್ಣ ಅಧಿಕಾರ ಹೊಂದಿದ್ದಾಳೆಂದು ಕೋರ್ಟ್ ಹೇಳಿದೆ.

12 ವಾರಗಳಿಗಿಂತ ಕಡಿಮೆ ಇರುವ ಗರ್ಭಿಣಿಯರು ಗರ್ಭಪಾತ ಮಾಡಿಸಿಕೊಳ್ಳಬಹುದು. 12-21 ವಾರಗಳ ನಡುವಿರುವ ಗರ್ಭದ ಬೆಳವಣಿಗೆಯಲ್ಲಿ ಸಮಸ್ಯೆ ಕಂಡು ಬಂದರೆ, ವೈದ್ಯರ ಸಲಹೆ ಮೇರೆಗೆ ಗರ್ಭಪಾತ ಮಾಡಿಸಿಕೊಳ್ಳಬಹುದಾಗಿದೆ. ಮಹಿಳೆಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಗರ್ಭಪಾತ ಮಾಡಿಸಬೇಕೆಂದು ನ್ಯಾಯಾಲಯ ತಿಳಿಸಿದೆ.

ಮಹಿಳಾ ಖೈದಿಯ ವಿಚಾರಣೆಯೊಂದನ್ನು ಕೈಗೆತ್ತಿಕೊಂಡ ಕೋರ್ಟ್ ಈ ಆದೇಶ ನೀಡಿದೆ. ಮಹಿಳೆ ಕೈದಿ ಗರ್ಭಪಾತ ಮಾಡಿಸಿಕೊಳ್ಳಲು ಇಚ್ಛಿಸಿದ್ರೂ ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿರಲಿಲ್ಲ. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್, ಗರ್ಭಪಾತ ಮಾಡಿಸಿಕೊಳ್ಳುವ ಸಂಪೂರ್ಣ ಹಕ್ಕು ಮಹಿಳೆಗೆ ಸೇರಿದ್ದು ಎಂದಿದೆ.

ಗರ್ಭ ಮಹಿಳೆಯ ಶರೀರದಲ್ಲದಾಗುವ ಬೆಳವಣಿಗೆ. ಇದು ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಇದರಿಂದ ಹೊರಬರಲು ಮುಂದಾಗುವ ಮಹಿಳೆಗೆ ಅಂತಿಮ ತೀರ್ಮಾನ ಕೈಗೊಳ್ಳುವ ಹಕ್ಕು ನೀಡಬೇಕು ಎಂದು ಕೋರ್ಟ್ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...