alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿಭಟನೆಗೆ ಮಣಿದು ಶಬರಿಮಲೆ ಪ್ರವೇಶದಿಂದ ಹಿಂದೆ ಸರಿದ ಮಹಿಳೆಯರು

ಯಾವುದೇ ವಯಸ್ಸಿನ ಮಹಿಳೆಯರು ಶಬರಿಮಲೆ ದೇವಾಲಯ ಪ್ರವೇಶಿಸಬಹುದೆಂಬ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಇಂದು ಇಬ್ಬರು ಮಹಿಳೆಯರು, ಬಿಗಿ ಪೊಲೀಸ್ ಭದ್ರತೆ ನಡುವೆ ದೇವಾಲಯ ಪ್ರವೇಶಿಸಲು ಮುಂದಾಗಿದ್ದರಾದರೂ ಪ್ರತಿಭಟನೆಗೆ ಮಣಿದು ಅದರಿಂದ ಹಿಂದೆ ಸರಿದಿದ್ದಾರೆ.

ಪತ್ರಕರ್ತೆ ಕವಿತಾ ಜಕ್ಕಲ್ ಹಾಗೂ ಮಹಿಳಾ ಹೋರಾಟಗಾರ್ತಿ ರೆಹನಾ ಫಾತಿಮಾ, ತಲೆಗೆ ಹೆಲ್ಮೆಟ್ ಧರಿಸಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ದೇವಾಲಯ ಪ್ರವೇಶಿಸಲು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಭಕ್ತರಿಂದ ಭಾರಿ ಪ್ರತಿಭಟನೆಯೂ ಎದುರಾಯಿತು.

ಆದರೂ ಇದನ್ನು ಲೆಕ್ಕಿಸದೆ ಈ ಇಬ್ಬರು ಮಹಿಳೆಯರು ದೇವಾಲಯ ಪ್ರವೇಶಿಸಲು ಮುಂದಾದಾಗ, ದೇವಾಲಯದ ಪ್ರಧಾನ ಅರ್ಚಕರು, ಒಂದು ವೇಳೆ ಮಹಿಳೆಯರು ಪ್ರವೇಶಿಸಿದರೆ ನಾವು ಪೂಜೆ ಮಾಡುವುದನ್ನೇ ನಿಲ್ಲಿಸುತ್ತೇವೆ. ಅಲ್ಲದೆ ದೇವಾಲಯದ ಗರ್ಭಗುಡಿಯ ಬಾಗಿಲು ಬಂದ್ ಮಾಡುವುದಾಗಿ ಹೇಳಿದರು.

ಪರಿಸ್ಥಿತಿ ವಿಕೋಪಕ್ಕೆ ತಿರುಗಬಹುದೆಂಬುದನ್ನು ಅರಿತ ಪೊಲೀಸ್ ಅಧಿಕಾರಿಗಳು, ದೇವಾಲಯ ಪ್ರವೇಶಿಸಲು ಮುಂದಾಗಿದ್ದ ಮಹಿಳೆಯರ ಮನವೊಲಿಸಿದ್ದು, ಇದಕ್ಕೆ ಮಣಿದ ಅವರುಗಳು ಇದರಿಂದ ಹಿಂದೆ ಸರಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...