alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿ ದುರಂತದ ಕಥೆ ಕಟ್ಟಿದ್ರಾ ಯುವತಿಯರು?

love

ಕಳೆದ ವಾರ ಪಂಜಾಬ್ ನ ಗುರುದಾಸ್ಪುರದಿಂದ ನಾಪತ್ತೆಯಾಗಿರುವ ಇಬ್ಬರು ಯುವತಿಯರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. 16 ವರ್ಷದ ಸೋಫಿಯಾ ಆಕೆಯ ಸಹೋದರಿ ಹಾಗೂ 18 ವರ್ಷದ ನಿಶಾ ಈ ಮೂವರು ಕಳೆದ ಶುಕ್ರವಾಸ ಸತಿಯಾಲಿ ಬಳಿ ಇರುವ ನಾಲೆ ವೀಕ್ಷಿಸಲು ಹೋಗಿದ್ರು.

ಸೋಫಿಯಾ ಒಂಟಿಯಾಗಿ ಮನೆಗೆ ಮರಳಿದ್ಲು. ಉಳಿದ ಇಬ್ಬರೂ ಸೆಲ್ಫಿ ತೆಗೆದುಕೊಳ್ಳುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಅಂತಾ ಹೇಳಿದ್ಲು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯ್ತು. ನಾಲೆಯನ್ನು ಬಂದ್ ಮಾಡಿ ಹುಡುಕಿದ್ರೂ ಯುವತಿಯರ ಶವ ಮಾತ್ರ ಸಿಕ್ಕಿರಲಿಲ್ಲ.

ಪೊಲೀಸ್ ವಿಚಾರಣೆ ವೇಳೆ ಸೋಫಿಯಾ ತನ್ನ ಹೇಳಿಕೆಯನ್ನು ಬದಲಿಸಿದ್ದಾಳೆ. ಇಬ್ಬರು ಯುವತಿಯರು ನಾಲೆಯಲ್ಲಿ ಕೊಚ್ಚಿ ಹೋಗಿಲ್ಲ. ಐಷಾರಾಮಿ ಬದುಕನ್ನು ಅರಸಿ ಅಪರಿಚಿತ ಪುರುಷರ ಜೊತೆಗೆ ಮುಂಬೈಗೆ ಓಡಿ ಹೋಗಿದ್ದಾರೆ ಅಂತಾ ತಿಳಿಸಿದ್ದಾಳೆ. ಕ್ಷಣಕ್ಷಣಕ್ಕೂ ಹೇಳಿಕೆ ಬದಲಾಯಿಸಿ ಪೊಲೀಸರನ್ನು ಗೊಂದಲಕ್ಕೆ ಸಿಲುಕಿಸುತ್ತಿದ್ದಾಳೆ.

ಬೇರೆ ಬೇರೆ ನಗರಗಳಲ್ಲೂ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಕಾಣೆಯಾದ ಯುವತಿ ಲವ್ ಪ್ರೀತ್ ಬಿಎ ಓದುತ್ತಿದ್ಲು. ನಿಶಾ ಈ ವರ್ಷ ದ್ವಿತೀಯ ಪಿಯುಸಿ ಮುಗಿಸಿದ್ದಾಳೆ. ಸೋಫಿಯಾ ಈ ಘಟನೆಯ ಏಕೈಕ ಪ್ರತ್ಯಕ್ಷದರ್ಶಿಯಾಗಿದ್ದು, ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...