alex Certify
ಕನ್ನಡ ದುನಿಯಾ       Mobile App
       

Kannada Duniya

ಸುರಕ್ಷಿತ ವಾಹನ ಚಾಲನೆಯಲ್ಲಿ ಮಹಿಳೆಯರೇ ಮುಂದು

ದೆಹಲಿ ಮಹಿಳೆಯರ ಮುಡಿಗೊಂದು ಗರಿ ಮೂಡಿದೆ. ಅತ್ಯಂತ ಸುರಕ್ಷಿತವಾಗಿ ವಾಹನ ಚಾಲನೆ ಮಾಡುವವರು ಮಹಿಳೆಯರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ದೆಹಲಿ ಪೊಲೀಸ್ ಪ್ರಕಾರ 2017 ರಲ್ಲಿ ಒಬ್ಬ ಮಹಿಳೆಯೂ ಕುಡಿದು ಗಾಡಿ ಚಾಲನೆ ಮಾಡಿ ಸಿಕ್ಕಿಬಿದ್ದಿಲ್ಲವಂತೆ.

2018ಕ್ಕೆ ಬಂದ್ರೆ ಈವರೆಗೆ ಒಬ್ಬ ಮಹಿಳೆ ಮಾತ್ರ ಡ್ರಿಂಕ್ ಅಂಡ್ ಡ್ರೈವ್ ಕೇಸ್ ನಲ್ಲಿ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾಳಂತೆ. ಟ್ರಾಫಿಕ್ ನಿಯಮವನ್ನು ಮಹಿಳೆಯರು ಕಡಿಮೆ ಪ್ರಮಾಣದಲ್ಲಿ ಬ್ರೇಕ್ ಮಾಡ್ತಾರೆ ಎಂಬ ಸಂಗತಿಯನ್ನೂ ದೆಹಲಿ ಪೊಲೀಸರು ಹೇಳಿದ್ದಾರೆ.

2017ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಟ್ರಾಫಿಕ್ ನಿಯಮ ಮುರಿದು ವಾಹನ ಚಾಲನೆ ಮಾಡಿದ 26 ಲಕ್ಷ ಮಂದಿ ಲೈಸೆನ್ಸ್ ರದ್ದು ಮಾಡಲಾಗಿದೆಯಂತೆ. ಇದ್ರಲ್ಲಿ ಕೇವಲ 600 ಮಂದಿ ಮಾತ್ರ ಮಹಿಳೆಯರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ದೆಹಲಿ ಪೊಲೀಸ್ ಜಂಟಿ ಕಮೀಷನರ್ (ಸಂಚಾರ) ಗರೀಮಾ ಭಟ್ನಾಗರ್ ಪ್ರಕಾರ, ಪುರುಷರಿಗಿಂತ ಮಹಿಳೆಯರು ಹೆಚ್ಚು ಸುರಕ್ಷಿತವಾಗಿ ವಾಹನ ಚಾಲನೆ ಮಾಡ್ತಾರಂತೆ. ರಸ್ತೆ ಅಪಘಾತದಲ್ಲಿಯೂ ಮಹಿಳಾ ಚಾಲಕಿಯರ ಪಾತ್ರ ಶೇಕಡಾ 2 ಎಂದು ಇಲಾಖೆ ತಿಳಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...